ಸುಂಟಿಕೊಪ್ಪ, ಮಾ. 3 : ಕಳೆದ 2 ದಿನಗಳಿಂದ ಪಾಕ್ ಸೇನೆ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಸಂಜೆ ದೇಶದ ಗಡಿ ತಲುಪುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಅಭಿನಂದನ್‍ಗೆ ಜಯ ಘೋಷಗಳನ್ನು ಕೂಗುತ್ತ ಪಾಕಿಸ್ತಾನಕ್ಕೆ ದಿಕ್ಕಾರ ಕೂಗಿದರು.

ತಾ. 1 ರಂದು ಸಂಜೆ ಕನ್ನಡ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ಒಗ್ಗೂಡಿ ರಾಷ್ಟ್ರಧ್ವಜವನ್ನು ಹಿಡಿದು ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವಧರ್Àಮಾನ್ ಅವರಿಗೆ ಜಯಘೋಷಗಳನ್ನು ಕೂಗುತ್ತಾ ಪಾಕಿಸ್ತಾನದ ವಿರುದ್ಧ ದಿಕ್ಕಾರಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ಗ್ರಾ.ಪಂ. ಸದಸ್ಯ ಸಿ.ಚಂದ್ರ, ಬಿಜೆಪಿ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ಕೊಕಾ, ನಗರ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ನಾಗೇಶ್ ಪೂಜಾರಿ, ವಿನೋದ್, ಪಟ್ಟೆಮನೆ ಪ್ರಸನ್ನ, ಸುದೀಶ್‍ಕುಮಾರ್ ಮತ್ತಿತರರು ಇದ್ದರು.