ಸಿದ್ದಾಪುರ, ಮಾ. 3 : ಹುಂಡಿ ಗ್ರಾಮದಲ್ಲಿ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿಯಿಂದ ಪುನರ್ ನಿರ್ಮಾಣವಾಗಿರುವ ಜುಮಾ ಮಸೀದಿಯನ್ನು ಧಾರ್ಮಿಕ ಮುಖಂಡ ಸುಲ್ತಾನುಲ್ ಉಲಮ ಕಾಂತಾಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನ ಮೈಗೂಡಿಸಿಕೊಂಡು ಸೌಹಾರ್ದದ ಸಮಾಜದ ನಿರ್ಮಾಣ ಮಾಡಲು ಮುಂದಾಗುವಂತೆ ಕರೆ ನೀಡಿದರು. ಯುವಕರು ಕಡ್ಡಾಯವಾಗಿ ಮಸೀದಿಯಲ್ಲಿಯೇ ನಮಾಜ್ ಮಾಡುವದನ್ನು ಮೈಗೂಡಿಸಿಕೊಳ್ಳಬೇಕು. ಮಹಿಳೆಯರು ಮತ್ತು ಯುವತಿಯರಿಗಾಗಿ ಧಾರ್ಮಿಕ ತರಗತಿಗಳನ್ನು ಮದರಸಗಳಲ್ಲಿ ಬೋಧಿಸುವಂತಾಗಬೇಕು ಎಂದು ಸೂಚಿಸಿದರು. ವೇದಿಕೆಯಲ್ಲಿ ಜಿಲ್ಲಾ ಖಾಝಿ ಮಹಮ್ಮದ್ ಮುಸ್ಲಿಯಾರ್, ಹುಂಡಿ ಮುಸ್ಲಿಂ ಜಮಾಅತ್ ಕಮಿಟಿಯ ಅಧ್ಯಕ್ಷ ಸಿ. ಮಹಮ್ಮದ್ ಹಾಜಿ, ಮುಖ್ಯ ಭಾಷಣಕಾರರಾಗಿ ಅಗಮಿಸಿದ ಅಬ್ದುಲ್ ಲತೀಪ್ ಸಹದಿ, ಮಸೀದಿಯ ಖತೀಬ್ ನೌಷದ್ ಜುóಹಾರಿ, ಮರ್ಕಜ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಹಂಸ ಅನ್ವರಿ, ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಲತೀಪ್, ಪ್ರಮುಖರಾದ ಅಲಿ ಸಖಾಫಿ, ಅಬ್ದುಲ್ ಜಬ್ಬಾರ್, ಹಸೈನಾರ್, ಅನೀಪ್, ಮುಸ್ತಫಾ ಸಖಾಪಿ üಸೇರಿದಂತೆ ಮತ್ತಿತರು ಇದ್ದರು.