ಮಡಿಕೇರಿ, ಮಾ. 2: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಅರಸು ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿವಿಧ ಶಾಲಾ ಮಕ್ಕಳಿಂದ ಪರಿಸರ ಗೀತಾ ಗಾಯನ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.

ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ವತಿಯಿಂದ ‘ವೃಕ್ಷ’ ಸಂರಕ್ಷಣೆ ಎಂಬ ಪರಿಸರ ನಾಟಕವನ್ನು ಶಾಲಾ ಮಕ್ಕಳು ಉತ್ತಮವಾಗಿ ಪ್ರದರ್ಶಿಸಿದರು. ಪರಿಸರ ಸಂರಕ್ಷಣೆಯಲ್ಲಿ ವೃಕ್ಷಗಳು ಎಷ್ಟು ಮಹತ್ವ ಹೊಂದಿವೆ. ಮರಗಳು ಪ್ರಕೃತಿಗೆ ಎಷ್ಟು ಕೊಡುಗೆ ನೀಡುತ್ತವೆ ಎಂಬ ಬಗ್ಗೆ ಮಕ್ಕಳು ನಾಟಕದ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು.

ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಸುಧಾ ಎಂ.ಕೆ., ಕಾರ್ಯಕ್ರಮದ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಶಿಕ್ಷಣ ಸಂಯೋಜಕ ಕೆ.ಬಿ. ರಾಧಾಕೃಷ್ಣ, ಶಿಕ್ಷಕರಾದ ಟಿ.ಬಿ.ಮಂಜುನಾಥ್, ಎಚ್.ಭಾರತಿ, ಕಲಾವಿದ ಸಾಗರ್ ತೊರೆನೂರು ಪಾಲ್ಗೊಂಡಿದ್ದರು.

ಶಿಕ್ಷಕ ಎಂ.ಆರ್. ದಾಸೇಗೌಡ ರಚನೆಯ ವೃಕ್ಷ ಸಂರಕ್ಷಣೆಯ ನಾಟಕವನ್ನು ಶಾಲೆಯ ವಿಜ್ಞಾನ ಶಿಕ್ಷಕಿ ಎಚ್.ಎನ್. ಭಾರತಿ ನಿರ್ದೇಶಿಸಿದ್ದರು. ನಂತರ ವಿದ್ಯಾರ್ಥಿ ಗಳು ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿದರು.