ಸಿದ್ದಾಪುರ, ಮಾ. 1 : ಪಾಲಿಬೆಟ್ಟ ಗ್ರಾ.ಪಂ ವ್ಯಾಪ್ತಿಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಅಂತಿಮಗೊಳಿಸಲಾದ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಐಎಸ್ (ವಿಲೇಜ್ ಇನ್ಫರ್ಮೇಶನ್ ಸಿಸ್ಟಂ) ಸಮೀಕ್ಷೆ ವರದಿಯನ್ನು ಪಂಚಾಯಿತಿ ಅಧ್ಯಕ್ಷ ಪಿ.ಪಿ.ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಗೆ ವಿವರಿಸಲಾಯಿತು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಧಿಕಾರಿ ಹೇಮಂತ್ ಕುಮಾರ್ ಮಾಹಿತಿಯನ್ನು ತಂತ್ರಾಂಶದ ಮೂಲಕ ಸಾರ್ವಜನಿ ಕರಿಗೆ ವಿವರಿಸಿ, ಅಕ್ಟೋಬರ್ 2018 ಮತ್ತು ಜನವರಿ 2019 ರಲ್ಲಿ 2 ಹಂತದಲ್ಲಿ ಪಾಲಿಬೆಟ್ಟ ಪಂಚಾಯತಿ ವ್ಯಾಪ್ತಿಯಲ್ಲಿ ಎನ್‍ಆರ್‍ಡಿಎಂಎಸ್ ಸಂಸ್ಥೆಯ 20 ಸಿಬ್ಬಂದಿಗಳು ಪಂಚಾಯತಿ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಮದಲ್ಲಿ ಸಮೀಕ್ಷೆ ನಡೆಸಿ ಸಂಪೂರ್ಣ ಡಿಜಿಟಲೀಕರಿಸಿದ ಮಾಹಿತಿಯನ್ನು ಸಭೆಯಲ್ಲಿ ತಂತ್ರಾಂಶದ ಸಹಕಾರದೊಂದಿಗೆ ವಿವರಿಸಿದರು.
ಗ್ರಾ.ಪಂ ವ್ಯಾಪ್ತಿಯ ಪ್ರತಿಯೊಂದು ಕಟ್ಟಡ ಅದರ ಅಳತೆ , ವಿಧ, ಒಳಗೊಂಡಂತೆ ಕಟ್ಟಡ ತೆರಿಗೆಯನ್ನೂ ಕೂಡ ಈ ತಂತ್ರಜ್ಞಾನ ಬಳಸಿ ಸಮರ್ಪಕವಾಗಿ ತಿಳಿಯಬಹುದಾಗಿದೆ. ಭೂ ಒಡೆತನ ಬಳಕೆ ಕೃಷಿ ವಿವರಗಳು ಮಣ್ಣಿನ ಗುಣಮಟ್ಟ ವಿವರಗಳು ಚರಂಡಿ ಮತ್ತು ರಸ್ತೆಗಳು, ಒಟ್ಟು ವಿಸ್ತೀರ್ಣ ರಸ್ತೆ ವಿಧಗಳು, ಬೀದಿದೀಪ ಕಂಬಗಳು, ವಿದ್ಯತ್ ಬಳಕೆ ಸೋಲಾರ್ ಬಳಕೆ ಗ್ಯಾಸ್ ಬಳಕೆ ಆಧಾರ್ ಮತ್ತು ಬ್ಯಾಂಕ್ ಖಾತೆದಾರ ಕುಟುಂಬಗಳು ಗ್ರಾಮದಲ್ಲಿ ಜಾನುವಾರುಗಳು, ವಾಹನ ಹೊಂದಿರುವ ಅಡುಗೆ ಅನಿಲ ಜೈವಿಕ ಅನಿಲ ಕುಡಿಯುವ ನೀರಿನ ವಿವರಗಳು,ನೀರಿನ ಗುಣಮಟ್ಟ, ಶಿಕ್ಷಣಸಂಸ್ಥೆಗಳು ಒಳಗೊಂಡಂತೆ 23 ವಿಷಯಗಳ ವಿಲೇಜ್ ಅಟ್ಲಾಸ್ ಅನ್ನು ಗ್ರಾಮ ಸಭೆಯಲ್ಲಿ ಮಂಡಿಸಿದರು. ಇದರ ತಂತ್ರಾಂಶವನ್ನು ಗ್ರಾ.ಪಂ ಗೆ ಹಸ್ತಾಂತರಿಸಲಾಯಿತು.
ಗ್ರಾಮ ಸಭೆಯಲ್ಲಿ ಕಟ್ಟಡ ತೆರಿಗೆ ಹೆಚ್ಚಳವಾಗುವ ಬಗ್ಗೆ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಿಡಿಒ ಪ್ರತಿಯೊಂದು ಕಟ್ಟಡದ ಅಳತೆಗೆ ಅನುಗುಣವಾಗಿ ಪಂಚಾಯತಿರಾಜ್ ಕಾಯ್ದೆಯಡಿ ಸರಕಾರ ನಿಗಧಿಪಡಿಸಿ ರುವ ಕನಿಷ್ಟ ತೆರಿಗೆಯನ್ನು ಪಂಚಾಯತಿಯಲ್ಲಿ ನಿಗಧಿ ಪಡಿಸಿದ್ದು ಈ ಕುರಿತು ಸಾರ್ವಜನಿಕರಿಗೆ ತಮ್ಮ ಕಟ್ಟಡದ ಅಳತೆಯನ್ನು ಹಾಗೂ ವಿಧವನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ, ಉಪಾಧ್ಯಕ್ಷ ಎಸ್ ಜಿ ರೇಖಾ, ಸದಸ್ಯರಾದ ಕುಟ್ಟಂಡ ದೀಪಕ್ ಗಣಪತಿ , ಜಿಲ್ಲಾ ಪಂಚಾ ಯತಿ ಮುಖ್ಯ ಯೋಜನಾಧಿಕಾರಿ ಸಂಧ್ಯಾ, ತಾ.ಪಂ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಗ್ರಾಮಸ್ಥರು ಹಾಜರಿದ್ದರು. ಪಿಡಿಒ ಅಬ್ದುಲ್ಲಾ ್ಲ ಸ್ವಾಗತಿಸಿ ವಂದಿಸಿದರು.