ಸುಂಟಿಕೊಪ್ಪ, ಮಾ.1: ಒಳ್ಳೆಯ ಕೆಲಸ ಮಾಡುವವರಿಗೆ ಅಲ್ಲಾವಿನ ಆಶೀರ್ವಾದ ಸಿಗಲಿದೆ ಜಾತಿ, ಮತ ಬೇಧವಿಲ್ಲದೆ ಮಳೆಗಾಲದಲ್ಲಿ ಮನೆ ಕಳಕೊಂಡವರಿಗೆ ಜಿ.ಪಂ. ಸದಸ್ಯ ಪಿ.ಎಂ.ಲತೀಫ್ ಅವರು ನೀಡಿದ 1 ಎಕ್ರೆ ಜಾಗದಲ್ಲಿ 16 ಮನೆ ನಿರ್ಮಿಸಲಿದ್ದು, ಸದ್ಯಕ್ಕೆ 6 ಮನೆಗೆ ಭೂಮಿಪೂಜೆ ನೇರವೇರಿಸಲಾಗಿದೆ ಎಂದು ಉಲುಗುಲಿಯಲ್ಲಿ ಜಿ.ಪಂ. ಸದಸ್ಯ ಪಿ.ಎಂ.ಲತೀಫ್ ನಿರಾಶ್ರಿತರಾದವರಿಗೆ 1 ಎಕ್ರೆ ಜಾಗವನ್ನು ಮನೆ ನಿರ್ಮಿಸಲು ಎ.ಪಿ.ಉಸ್ತಾದ್ ಅವರ ಮೂಲಕ ಎಸ್‍ವೈಎಸ್ ಸಂಘಟನೆಗೆ ದಾನ ನೀಡಿದ್ದರು. ಈಗ ಪ್ರಥಮ ಹಂತವಾಗಿ 1 ಮನೆಗೆ 6 ಲಕ್ಷದಂತೆ 6 ಮನೆ ನಿರ್ಮಿಸಲಾಗುವದೆಂದರು. ದಾನಿಗಳು ಮನೆ ನಿರ್ಮಾಣಕ್ಕೆ ನೆರವು ನೀಡಬೇಕೆಂದು ಎ.ಪಿ. ಉಸ್ತಾದ್ ನೆರೆದಿದ್ದ ಭಾಂದವರಿಗೆ ಕರೆ ನೀಡಿದರು.
ಜಿ.ಪಂ.ಸದಸ್ಯ ಹಾಗೂ ಸ್ಥಳ ದಾನಿ ಪಿ.ಎಂ. ಲತೀಫ್ ಮಾತನಾಡಿ ಎಸ್‍ವೈಎಸ್, ಎಸ್‍ಎಸ್‍ಎಫ್ ಸಂಘಟನೆ ಮನೆ ನಿರ್ಮಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಜಾತಿ ಮತ ಬೇಧವಿಲ್ಲದೆ ಆರ್ಹರಿಗೆ 16 ಮನೆ ದಾನ ನೀಡಿದ ಜಾಗದಲ್ಲಿ 7 ತಿಂಗಳ ಒಳಗೆ ನಿರ್ಮಾಣಗೊಳ್ಳಲಿದೆ ಎಂದೂ ಹೇಳಿದರು.
ಅಬ್ದುಲ್ ರಶೀದ್ ಜೈನಿ ಕಂಕೀಜೆ ಮಾತನಾಡಿ ಜಾಗವನ್ನು ದಾನ ನೀಡಿದ ಲತೀಫ್ ಸ್ಮರಿಸುತ್ತಾ ಆನೇಕ ಅರ್ಜಿಗಳು ನಮ್ಮ ಸಂಸ್ಥಗೆ ಬಂದಿದ್ದು ಸರಕಾರ ಹಾಗೂ ಜಿಲಾಡಳಿತದ ಆದೇಶವನ್ನು ಅನುಸರಿಸಿಕೊಂಡು ಇಲ್ಲಿ ಮನೆಯನ್ನು ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭ ಎಸ್‍ವೈಎಸ್‍ನ ರಾಜ್ಯ ಸಮಿತಿ ಸದಸ್ಯ ಸಖಾಫಿ, ಜಿಲ್ಲಾಧ್ಯಕ್ಷ ಅಜೀಜ್ ಸಖಾಫಿ, ಅಬ್ಧುಲ್ ಹಫೀಜ್, ಪಿ.ಎಂ.ಯೂಸುಫ್ ಇದ್ದರು.