ನಾಪೆÇೀಕ್ಲು, ಮಾ. 1: “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಬರಹಗಳು ಎಲ್ಲಾ ವಿದ್ಯಾದೇಗುಲಗಳ ಪ್ರವೇಶ ದ್ವಾರದಲ್ಲಿಯೇ ಕಂಡು ಬರುತ್ತದೆ. ಆದರೆ ಆ ವಿದ್ಯಾ ದೇಗುಲದ ಒಳಗೆ ಧೈರ್ಯದಿಂದ ಹೋಗಲು ಸಾಧ್ಯವಾಗದಿದ್ದರೆ ಈ ಬರಹಕ್ಕೆ ಮಹತ್ವವಿದೆಯೇ? ಎಂಬದು ಎಲ್ಲರಲ್ಲಿಯೂ ಉದ್ಭವಿಸುವ ಪ್ರಶ್ನೆ. ಜಿಲ್ಲೆಯಲ್ಲಿರುವ ಬಹುತೇಕ ವಿದ್ಯಾ ದೇಗುಲಗಳು ನಾಡಿನ ಹಿರಿಯರ, ದಾನಿಗಳ ಸಹಾಯ, ಸಹಕಾರದಿಂದ ನಿರ್ಮಾಣವಾಗಿದ್ದಾಗಿದೆ. ಇವಗಳಲ್ಲಿ ಹಲವು ಶಾಲೆಗಳು ಈಗಾಗಲೇ ಶತಮಾನೋತ್ಸವವನ್ನು ಆಚರಿಸಿಕೊಂಡಿವೆ.

ಆದರೆ ಶಾಲೆಯ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಇಳಿಮುಖ ವಾಗುತ್ತಿರುವದು ಒಂದೆಡೆಯಾದರೆ, ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರ ಕ್ರಮ ಕೈಗೊಳ್ಳದಿರುವದು ದುರಂತವಾಗಿದೆ. ಕೆಲವು ಶಾಲೆಗಳಲ್ಲಿ ಪುರಾತನ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿ, ಇಂದೋ-ನಾಳೆಯೋ ಧರೆಗುರುಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ದುರಸ್ತಿಗೆ, ತೆರವಿಗೆ ಕ್ರಮಕೈಗೊಳ್ಳದ ಶಿಕ್ಷಣ ಇಲಾಖೆ ನೂತನ ಕಟ್ಟಡ ನಿರ್ಮಿಸುತ್ತಿರುವದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಶಿಥಿಲಾವಸ್ಥೆಯ ಕಟ್ಟಡಗಳ ಬಳಿಯಲ್ಲಿ ಓಡಾಡುವ, ಆಟವಾಡುವ ವಿದ್ಯಾರ್ಥಿಗಳ ಪೆÇೀಷಕರು ಕೂಡ ಇದರಿಂದ ಭಯಭೀತರಾಗಿದ್ದಾರೆ. ಇದಕ್ಕೆ ಉದಾಹರಣೆ ನಾಪೆÇೀಕ್ಲು ವ್ಯಾಪ್ತಿಯ ಹಲವು ಸರಕಾರಿ ವಿದ್ಯಾಸಂಸ್ಥೆಗಳು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆ: ಇದು ಶತಮಾನ ಕಂಡ ಶಾಲೆ. ಇಲ್ಲಿ ಹಿಂದೆ ವಿದ್ಯಾಭ್ಯಾಸ ಮಾಡಿದ ಹಲವರು ಮಂತ್ರಿ ಪದವಿ ಹಾಗೂ ಇನ್ನಿತರ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಾಡಿಗೆ ಕೀರ್ತಿ ತಂದಿದ್ದಾರೆ. ಆದರೆ ಇತ್ತೀಚಿನ ಇಂಗ್ಲೀಷ್ ವ್ಯಾಮೋಹದಲ್ಲಿ ಸರಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವದು ದುರಾದೃಷ್ಟಕರ. ಅದರೊಂದಿಗೆ ಪುರಾತನ ಕಟ್ಟಡಗಳ ದುರಸ್ತಿಗೆ ಇಲಾಖೆ ಕ್ರಮ ಕೈಗೊಳ್ಳದಿರುವದು ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳ ಅಸ್ಥಿತ್ವಕ್ಕೆ ಧಕ್ಕೆ ಬರುವಂತಾಗಿದೆ.

ಈ ವಿದ್ಯಾಸಂಸ್ಥೆಗೆ ಸೇರಿದ ಶಾಲಾ ಕಟ್ಟಡವೊಂದರ ಛಾವಣಿ ಮತ್ತು ಗೋಡೆ ಕಳೆದ ಒಂದು ವರ್ಷದ ಹಿಂದೆಯೇ ಕುಸಿದು ಬಿದ್ದಿದೆ. ಆದರೆ ಇಲ್ಲಿಯವರೆಗೆ ಅದರ ತೆರವಿಗಾಗಲಿ, ದುರಸ್ತಿಗಾಗಲಿ ಇಲಾಖೆ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರಾದ ಕುಲ್ಲೇಟಿರ ಅರುಣ್ ಬೇಬ.

ಬೇತು ಶಾಲೆ: ಈ ವಿದ್ಯಾಸಂಸ್ಥೆಯಲ್ಲಿಯೂ ತಕ್ಕ ಮಟ್ಟಿಗೆ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರೂ ಇದ್ದಾರೆ. ಇಲ್ಲಿಯೂ ಪುರಾತನ ಶಾಲಾ ಕಟ್ಟಡವೊಂದಿದೆ. ಅದೂ ಇಂದೋ, ನಾಳೆಯೋ ಕುಸಿಯುವ ಹಂತ ತಲುಪಿದೆ. ಇದರ ಸನಿಹದಲ್ಲಿಯೇ ವಿದ್ಯಾರ್ಥಿಗಳು ದಿನ ನಿತ್ಯ ಓಡಾಡುತ್ತಿದ್ದಾರೆ. ಇದನ್ನು ತೆರವುಗೊಳಿಸುವ ಬದಲು ಶಾಲಾ ಆವರಣದಲ್ಲಿದ್ದ ಸ್ವಲ್ಪ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಓಡಾಡಲು ಸ್ಥಳಾವಕಾಶ ಇಲ್ಲದಂತಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರಾದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ.

ನಾಪೆÇೀಕ್ಲು ಸರಕಾರಿ ಪ್ರೌಢಶಾಲೆ: ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಮಸ್ಯೆಯೂ ಇದಕ್ಕಿಂತ ಭಿನ್ನವಲ್ಲ. ಇಲ್ಲಿಯೂ ಹಳೇ ಕಟ್ಟಡಗಳ ದುರಸ್ತಿಗೆ ಕ್ರಮಕೈಗೊಳ್ಳುವ ಬದಲು ನೂತನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಂಡಿದೆ. ಪ್ರಾಂಶುಪಾಲರ ಅನುಕೂಲಕ್ಕಾಗಿ ಇಲ್ಲಿ ಹಿಂದೆ ವಸತಿ ಗೃಹ ನಿರ್ಮಿಸಲಾಗಿದೆ. ಆದರೆ ಹಲವು ವರ್ಷಗಳಿಂದ ಇಲ್ಲಿ ಯಾರೂ ವಾಸವಾಗಿಲ್ಲ. ಕಾರಣ ಇದು ವಾಸಕ್ಕೆ ಯೋಗ್ಯವಲ್ಲ. ಇದು ಭೂತ ಬಂಗಲೆಯಂತಿದ್ದು, ನೋಡುಗರಿಗೆ ಭಯ ಹುಟ್ಟಿಸುವಂತಿದೆ. ಇದು ಇದೇ ರೀತಿ ಮುಂದುವರಿದರೆ ಈ ಕಟ್ಟಡ ಬೀಳುವದರಲ್ಲಿ ಯಾವದೇ ಸಂಶಯವಿಲ್ಲ ಎನ್ನುತ್ತಾರೆ ಸ್ಥಳೀಯರಾದ ಎಂ.ಎ. ಮನ್ಸೂರ್ ಅಲಿ.

ಪದವಿಪೂರ್ವ ಕಾಲೇಜು: ಇಲ್ಲಿ ಪ್ರೌಢಶಾಲಾ ಕಟ್ಟಡಗಳನ್ನು ಬಳಸಿಕೊಂಡು ಪದವಿ ಪೂರ್ವ ಕಾಲೇಜಿನ ತರಗತಿಗಳನ್ನು ಇಲ್ಲಿ ನಡೆಸಲಾಗುತ್ತಿತ್ತು. ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಿಂದೆ ರೂ. 45 ಲಕ್ಷ ವೆಚ್ಚದಲ್ಲಿ ಇಲ್ಲಿ ಕಟ್ಟಡವೊಂದನ್ನು ನಿರ್ಮಿಸಲಾಯಿತು. ಕಟ್ಟಡ ಉದ್ಘಾಟನೆಗೊಳ್ಳದಿದ್ದರೂ ಶಾಲಾ ಕೊಠಡಿಗಳ ಕೊರತೆಯ ಕಾರಣದಿಂದ 5 ವರ್ಷಗಳ ಹಿಂದೆ ಇದರಲ್ಲಿ ವಿಜ್ಞಾನ ತರಗತಿಗಳನ್ನು ಆರಂಭಿಸಲಾಯಿತು. ತದನಂತರ ಅವ್ಯವಸ್ಥೆಗಳ ಕಾರಣದಿಂದ ಅದನ್ನು ಸ್ಥಗಿತಗೊಳಿಸಲಾಯಿತು. ಈಗ ಆ ಕಟ್ಟಡ ಪೂರ್ತಿಯಾಗಿ ಕಾಡುಪಾಲಾಗಿದ್ದು ಭೂತ ಕನ್ನಡಿಯ ಮೂಲಕ ಇದನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪೆÇೀಷಕರು. ಇಲ್ಲಿನ ತರಗತಿ ಕೊಠಡಿ ಛಾವಣಿ ಮಳೆಗಾಲದಲ್ಲಿ ಸೋರುತ್ತಿದ್ದು, ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ಕಾಡುಪಾಲಾದ ನೂತನ ಕಟ್ಟಡವನ್ನು ದುರಸ್ತಿಗೊಳಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪದವಿ ಕಾಲೇಜು: ನಾಡಿನ ಹಿರಿಯರ ಪ್ರಯತ್ನದ ಫಲವಾಗಿ ಇಲ್ಲಿ ಸರಕಾರಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡ ದುರಸ್ತಿಗೆ ಇಲಾಖಾ ಇಂಜಿನಿಯರ್ ಅವರನ್ನು ಸಂಪರ್ಕಿಸಲಾಗುತ್ತಿದ್ದು, ಮಳೆಗಾಲದ ಮುನ್ನ ದುರಸ್ತಿಗೆ ಕ್ರಮಕೈಗೊಳ್ಳಲಾಗುವದು. ಪದವಿ ಪೂರ್ವ ಕಾಲೇಜಿಗೆ ಸೇರಿದ ನೂತನ ಕಟ್ಟಡಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪಡೆಯಲು ಕಳೆದ 3 ವರ್ಷಗಳಿಂದ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸಂಬಂಧಿಸಿದವರೊಂದಿಗೆ ಚರ್ಚಿಸಿ ಇದರ ದುರಸ್ತಿಗೂ ಕ್ರಮಕೈಗೊಳ್ಳಲಾಗುವದು.

-ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಜಿ.ಪಂ .ಸದಸ್ಯರು, ನಾಪೆÇೀಕ್ಲು

ಸರಕಾರ, ಶಿಕ್ಷಣ ಇಲಾಖೆ ಒಂದೆಡೆ ಮಕ್ಕಳ ಸೌಲಭ್ಯಕ್ಕಾಗಿ ಬಿಸಿಯೂಟ, ಉಚಿತ ಸಮವಸ್ತ್ರ, ಸೈಕಲ್ ವಿತರಣೆಯಂತಹ ಹಲವು ವ್ಯವಸ್ಥೆಗಳನ್ನು ಮಾಡುತ್ತಿದೆ. ಆದರೆ ದುಸ್ಥಿತಿಯಲ್ಲಿರುವ ಪುರಾತನ ಶಾಲಾ ಕಟ್ಟಡಗಳ ದುರಸ್ತಿ ಮತ್ತು ತೆರವಿಗೆ ಕ್ರಮಕೈಗೊಳ್ಳದಿರುವದು ದುರಾದೃಷ್ಟಕರ. ಕೂಡಲೇ ಈ ಬಗ್ಗೆ ಗಮನಹರಿಸಬೇಕು.

-ಚಂಗೇಟಿರ ಶಂಭು ಅಚ್ಚಯ್ಯ, ನಾಪೆÇೀಕ್ಲುಪ್ರಥಮ ದರ್ಜೆ ಕಾಲೇಜು ಆರಂಭಿಸಲಾಯಿತು. ಇದಕ್ಕಾಗಿ ಪದವಿ ಪೂರ್ವ ಕಾಲೇಜಿನ 10 ಎಕರೆ ಸ್ಥಳ ಮತ್ತು ಪ್ರೌಢಶಾಲಾ ವಿಭಾಗದ ಹಳೇ ವಿದ್ಯಾರ್ಥಿ ನಿಲಯವನ್ನು ಬಳಸಿಕೊಳ್ಳಲಾಯಿತು.

ನಂತರ 2008ರಲ್ಲಿ ಭವ್ಯವಾದ ನೂತನ ಕಾಲೇಜು ಕಟ್ಟಡ ನಿರ್ಮಿಸಲಾಯಿತು. ಆದರೆ ಇಷ್ಟು ವರ್ಷವಾದರೂ ಕಟ್ಟಡಕ್ಕೆ ಬೇಕಾದ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಯಾವದೇ ಮೂಲಭೂತ ಸೌಲಭ್ಯ ನೀಡಲಾಗಿಲ್ಲ. ಸೂಕ್ತ ಭದ್ರತೆಯೂ ಇಲ್ಲ. ಕಿಡಿಗೇಡಿಗಳು ಕಾಲೇಜು ಕಟ್ಟಡದ ಕಿಟಕಿಯ ಗಾಜುಗಳನ್ನು ಪುಡಿ ಮಾಡಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಎಲ್ಲಾ ವ್ಯವಸ್ಥೆಗಳ ಬಗ್ಗೆ ಶಿಕ್ಷಣ ಇಲಾಖೆ, ಸರಕಾರ ಸೂಕ್ತ ಕ್ರಮಕೈಗೊಳ್ಳುವದರ ಮೂಲಕ ನಾಡಿನ ಹಿರಿಯರು ವಿದ್ಯಾಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಿ ರಕ್ಷಿಸಬೇಕು ಎನ್ನುವದು ಎಲ್ಲಾ ನಾಗರಿಕರ ಅಪೇಕ್ಷೆಯಾಗಿದೆ.

- ಪಿ.ವಿ. ಪ್ರಭಾಕರ್