ಮಡಿಕೇರಿ, ಮಾ. 1: ಮೂರ್ನಾಡು ಬಳಿ ಬಿಳಿಗೇರಿ - ಕುಂಬಳದಾಳು ರಸ್ತೆಯಲ್ಲಿ ವಾಹನವೊಂದರಲ್ಲಿ (ಕೆ.ಎ. 12 7726) ಅಕ್ರಮವಾಗಿ ನಂದಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಸಹಾಯಕ ಅರಣ್ಯಾಧಿಕಾರಿ ನೆಹರು ನೇತೃತ್ವದಲ್ಲಿ ಜಗದೀಶ್, ಆರೋಗ್ಯಸ್ವಾಮಿ, ಬಾಬು ರಾಥೋಡ್, ತಿಮ್ಮಯ್ಯ, ಕುಶಾಲಪ್ಪ, ಭವ್ಯ, ಮಂದಪ್ಪ, ವೆಂಕಟರಮಣ, ಶ್ಯಾಮ ಹಾಗೂ ಜಾನ್ ಪಾಲ್ಗೊಂಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾರ್ಗದರ್ಶನದಲ್ಲಿ ಹಾಕತ್ತೂರು ಗ್ರಾಮದ ಇಲಿಯಾಸ್ ವಿರುದ್ಧ ಕ್ರಮ ಜರುಗಿಸಲಾಗಿದೆ. ಮರದ ಮೌಲ್ಯ ಅಂದಾಜು ರೂ. ಒಂದು ಲಕ್ಷವಾಗಿದೆ.