ಸೋಮವಾರಪೇಟೆ, ಮಾ. 1: ರೈತರು ಕೃಷಿ ಬಳಕೆಗಾಗಿ ಬಳಸುತ್ತಿರುವ ಐ.ಪಿ. ಸೆಟ್‍ಗಳಿಗೆ 240 ವೋಲ್ಟ್‍ನಷ್ಟು ವಿದ್ಯುತ್‍ನ್ನು ಉಚಿತವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಾರರ ಹೋರಾಟ ಸಮಿತಿ ಪ್ರಮುಖರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಿದ್ದ ಸಂದರ್ಭ ಈ ಬಗ್ಗೆ ಗಮನ ಸೆಳೆದ ಸಂಘದ ಅಧ್ಯಕ್ಷ ಎಂ.ಟಿ. ವಿಜೇಂದ್ರ, ಕಾರ್ಯದರ್ಶಿ ಲಿಂಗೇರಿ ರಾಜೇಶ್, ಪ್ರಮುಖರಾದ ಲಕ್ಷ್ಮಣ ಸೇರಿದಂತೆ ಇತರರು, ಕಾಫಿ, ಏಲಕ್ಕಿ, ಕರಿಮೆಣಸು ರಫ್ತಿನಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯವಿದ್ದರೂ ಸಹ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಈ ಮಧ್ಯೆ ವಿದ್ಯುತ್ ಇಲಾಖೆಯವರು ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಕ್ಷಣ ವಿದ್ಯುತ್ ಸ್ಥಗಿತಗೊಳಿಸುವ ಕಾರ್ಯವನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಉಚಿತವಾಗಿ 240 ವೋಲ್ಟ್‍ನಷ್ಟು ವಿದ್ಯುತ್‍ನ್ನು ರೈತರ ಐ.ಪಿ. ಸೆಟ್‍ಗಳಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕುಮಾರಸ್ವಾಮಿ ಅವರ ಗಮನ ಸೆಳೆಯಲಾಗಿದೆ.