ಮಡಿಕೇರಿ, ಮಾ. 2: ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠದ ಪ್ರಚಾರೋಪನ್ಯಾಸ ಕಾರ್ಯಕ್ರಮವು ತಾ. 5ರಂದು ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಮತ್ತು ಪ್ರಥಮ ದರ್ಜೆ ಕಾಲೇಜು, ನಾಪೋಕ್ಲು ಇಲ್ಲಿ ನಡೆಯಲಿದೆ.

ಮೊದಲ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೋಟರಿ ಕುಂಞÂ ಅಬ್ದುಲ್ಲ ಆಗಮಿಸಲಿದ್ದಾರೆ. ಕೊಡಗಿನ ಸಂಸ್ಕøತಿಯ ಮೇಲೆ ಸಮಕಾಲೀನ ವಿದ್ಯಮಾನಗಳ ಪ್ರಭಾವ ಕುರಿತು ಮಾತಾನಾಡಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜು, ನಾಪೋಕ್ಲುವಿನ ಪ್ರಬಾರ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಹಿಸಲಿದ್ದಾರೆ.

ಎರಡನೇ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿ ಶ್ರೀಮತಿ ಪುದಿಯನೆರವನ ರೇವತಿ ರಮೇಶ್ ಆಗಮಿಸಲಿದ್ದಾರೆ. ಅವರು ಕೊಡಗಿನಲ್ಲಿ ಐನ್‍ಮನೆ ಸಂಸ್ಕøತಿಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಾ. ಟಿ.ಕೆ. ಬೋಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆರ್.ಬಿ.ಎ.ಎನ್. ಕಾಲೇಜು, ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕ ಡಾ. ಅವಿನಾಶ್ ವಿ. ಹಾಗೂ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠದ ಸಂಯೋಜಕಿ ಡಾ. ಮೀನಾಕ್ಷಿ ಎಂ.ಎಂ ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.