ವೀರಾಜಪೇಟೆ, ಮಾ. 1: ಕಾವೇರಿ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ಕೊಡಗು ವಲಯ ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸ ಲಾಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಇಂದು ಗ್ರಾಮೀಣ ಕ್ರೀಡೆಗಳನ್ನು ಆಡುವದು ಅಪರೂಪವಾಗಿದೆ.

ಇಂದಿನ ಯುವಜನತೆ ಈ ಕ್ರೀಡೆಗಳ ಕುರಿತು ಜ್ಞಾನ ಮತ್ತು ಆಸಕ್ತಿ ಹೊಂದಿಲ್ಲ ಎಂದು ವಿಷಾಧಿಸಿದರು. ಪ್ರಾಂಶುಪಾಲ ಎನ್.ಎಂ. ನಾಣಯ್ಯ ಹಾಗೂ ದೈಹಿಕ ಶಿಕ್ಷಕಿ ಡಾ. ಎಂ.ಎಂ. ದೇಚಮ್ಮ ಪಾಲ್ಗೊಂಡಿದ್ದರು. ನಿವೃತಿ ಹೊಂದುತ್ತಿರುವ ಪ್ರೊ. ಸಿ.ಎಂ. ನಾಚಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಗ್ರಾಮೀಣ ಕ್ರೀಡಾಕೂಟದಲ್ಲಿ ಲಗೋರಿ, ಕುಂಟೆಬಿಲ್ಲೆ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವದು, ರಬ್ಬರ್ ಬಿಲ್ಲು, ಶಕ್ತಿ ಕೋಲು, ತೆಂಗೆ ಪೋರ್ ಹಾಗೂ ಹಗ್ಗಜಗ್ಗಾಟ ಕ್ರೀಡೆಗಳನ್ನು ಆಯೋಜಿಸ ಲಾಯಿತು. ಕೊಡಗು ವಲಯದ ಹತ್ತು ಕಾಲೇಜುಗಳ ಮಹಿಳೆಯರ ಮತ್ತು ಪುರುಷರ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು. ರಬ್ಬರ್ ಬಿಲ್ಲು ಕ್ರೀಡೆಯ ಮಹಿಳೆಯರ ವಿಭಾಗದಲ್ಲಿ ಪೆರುಂಬಾಡಿಯ ಸಂಶುಲ್ ಉಲ್ಲೇಮಾ ಕಾಲೇಜಿನ ಅಫ್ಸಿಯ ಪ್ರಥಮ, ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನ ಇಂಪನ ಹಾಗೂ ಹೇಮ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ಕರಣ್ ಕಾವೇರಪ್ಪ ಪ್ರಥಮ, ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ಕೌಶಿಕ್ ದ್ವಿತೀಯ ಮತ್ತು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪವನ್ ತೃತೀಯ ಸ್ಥಾನ ಪಡೆದುಕೊಂಡರು.

ತೆಂಗಿನಕಾಯಿಗೆ ಕಲ್ಲು ಹೊಡೆಯುವ ಕ್ರೀಡೆಯ ಮಹಿಳೆಯರ ವಿಭಾಗದಲ್ಲಿ ಕಾವೇರಿ ಪದವಿ ಕಾಲೇಜಿನ ನಿಶಾ ಮಾದಪ್ಪ ಪ್ರಥಮ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗೀತ ದ್ವಿತೀಯ ಹಾಗೂ ಸಂಶುಲ್ ಉಲ್ಲೇಮಾ ಕಾಲೇಜಿನ ಮಿಸ್‍ಬಾ ತೃತೀಯ ಸ್ಥಾನ ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ಕಾವೇರಿ ಪದವಿ ಕಾಲೇಜಿನ ರಂಜಿತ್ ಎಸ್.ಕೆ. ಪ್ರಥಮ, ಕಾವೇರಿ ಪದವಿ ಕಾಲೇಜಿನ ಅಭಿಷೇಕ್ ದ್ವಿತೀಯ ಹಾಗೂ ಎಫ್.ಎಂ.ಸಿ. ಕಾಲೇಜಿನ ವಚನ್ ತೃತೀಯ ಸ್ಥಾನವನ್ನು ಪಡೆದು ಕೊಂಡರು. ತೆಂಗೆ ಪೋರ್ ಕ್ರೀಡೆಯ ಮಹಿಳೆಯರ ವಿಭಾಗದಲ್ಲಿ ಎಫ್.ಎಂ.ಸಿ. ಕಾಲೇಜಿನ ಲೀಲಾವತಿ ಪ್ರಥಮ, ಕಾವೇರಿ ಪದವಿ ಕಾಲೇಜಿನ ಅಕ್ಷತಾ ದ್ವಿತೀಯ ಮತ್ತು ಎಫ್.ಎಂ.ಸಿ. ಕಾಲೇಜಿನ ಪವಿತ್ರ ತೃತೀಯ ಸ್ಥಾನವನ್ನು ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ಎಫ್.ಎಂ.ಸಿ. ಕಾಲೇಜಿನ ಅಬಿಷೇಕ್ ಪ್ರಥಮ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶೈನ್ ಹಾಗೂ ಜಗದೀಶ್ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡರು.

ಲಗೋರಿಯ ಮಹಿಳೆಯರ ವಿಭಾಗದಲ್ಲಿ ಸಂತ ಅನ್ನಮ್ಮ ಕಾಲೇಜು ಪ್ರಥಮ ಮತ್ತು ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಥಮ ಹಾಗೂ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಕುಂಟೆಬಿಲ್ಲೆ ಕ್ರೀಡೆಯಲ್ಲಿ ಮಹಿಳೆ ಯರ ವಿಭಾಗದಲ್ಲಿ ಮಡಿಕೇರಿಯ ಎಫ್.ಎಂ.ಸಿ. ಕಾಲೇಜು ಪ್ರಥಮ ಹಾಗೂ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದು ಕೊಂಡರು. ಪುರುಷರ ವಿಭಾಗದಲ್ಲಿ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಮತ್ತು ವೀರಾಜಪೇಟೆ ಕಾವೇರಿ ಪದವಿ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಶಕ್ತಿಕೋಲು ಕ್ರೀಡೆಯ ಮಹಿಳೆಯರ ವಿಭಾಗದಲ್ಲಿ ಮಡಿಕೇರಿಯ ಎಫ್.ಎಂ.ಸಿ. ಕಾಲೇಜು ಪ್ರಥಮ, ವೀರಾಜಪೇಟೆಯ ಕಾವೇರಿ ಪದವಿ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಥಮ ಹಾಗೂ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಹಗ್ಗಜಗ್ಗಾಟ ಕ್ರೀಡೆಯ ಮಹಿಳೆಯರ ವಿಭಾಗದಲ್ಲಿ ಮಡಿಕೇರಿಯ ಎಫ್.ಎಂ.ಸಿ. ಕಾಲೇಜು ಪ್ರಥಮ ಹಾಗೂ ವೀರಾಜಪೇಟೆಯ ಕಾವೇರಿ ಪದವಿ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಪುರುಷರ ವಿಭಾಗದಲ್ಲಿ ಗೋಣಿಕೊಪ್ಪದ ಕಾವೇರಿ ಪದವಿ ಕಾಲೇಜು ಪ್ರಥಮ ಹಾಗೂ ವೀರಾಜ ಪೇಟೆಯ ಕಾವೇರಿ ಪದವಿ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಬಹುಮಾನ ವಿತರಣೆ ಸಮಾರಂಭದಲ್ಲಿ ಅಂತ ರಾಷ್ಟ್ರೀಯ ಹಾಕಿಪಟು ಲೀಲಾವತಿ ಅವರನ್ನು ಸನ್ಮಾನ ಮಾಡಲಾಯಿತು.