ಸೋಮವಾರಪೇಟೆ, ಮಾ. 1: ತಾಲೂಕಿನ ಅರಿಶಿನಗುಪ್ಪೆ ಶ್ರೀ ಮಂಜುನಾಥ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ತಾ. 4ರಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ತಾ. 4ರಂದು ಬೆಳಿಗ್ಗೆ 5.30ಕ್ಕೆ ಮಹಾಗಣಪತಿ ಹೋಮ, ತೈಲಾಭಿಷೇಕ, 6ಕ್ಕೆ ಕ್ಷೀರಾಭಿಷೇಕ, 9ಕ್ಕೆ ದ್ವಿತೀಯ ಪೂಜೆ ಮತ್ತು ಕಬ್ಬಿನ ಹಾಲಿನ ಅಭಿಷೇಕ, 12ಕ್ಕೆ ತೃತೀಯಯಾಮ ಮತ್ತು ಎಳನೀರು ಅಭಿಷೇಕ, 3ಕ್ಕೆ ನಾಲ್ಕನೆಯಾಮ ಪೂಜೆ ಮತ್ತು ಎಳನೀರು ಅಭಿಷೇಕ, 6ಕ್ಕೆ ಐದನೇಯಾಮ ಪೂಜೆ ಮತ್ತು ಪಂಚಾಮೃತ ಅಭಿಷೇಕ ನಡೆಯಲಿದೆ.
ರಾತ್ರಿ 9ಕ್ಕೆ ಆರನೆಯಾಮ ಪೂಜೆ ಮತ್ತು ಜಲಾಭಿಷೇಕ, 12ಕ್ಕೆ ಏಳನೆಯಾಮ ಪೂಜೆ ಮತ್ತು ಜಲಾಭಿಷೇಕ, ಬೆಳಗ್ಗಿನ ಜಾವ 3ಕ್ಕೆ ಎಂಟನೆಯಾಮ ಪೂಜೆ ಮತ್ತು ಭಸ್ಮಾಭಿಷೇಕ. ನಂತರ 7ಕ್ಕೆ ರುದ್ರಹೋಮ ಪ್ರಾರಂಭಗೊಂಡು, 10ಕ್ಕೆ ಮಹಾ ಮಂಗಳಾರತಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9449255102, 9483844051 ಸಂಪರ್ಕಿಸಬಹುದಾಗಿದೆ.