ವೀರಾಜಪೇಟೆ, ಮಾ. 1: ವೀರಾಜಪೇಟೆ ತೆಲುಗರಬೀದಿಯಲ್ಲಿರುವ ಮಾರಿಯಮ್ಮ ಮತ್ತು ಅಂಗಾಳ ಪರಮೇಶ್ವರಿ ಸನ್ನಿಧಿಯಲ್ಲಿ ಮಹಾಶಿವರಾತ್ರಿ ತಾ. 2ರಿಂದ 5ರವರೆಗೆ ಆಚರಿಸಲು ನಿರ್ಧರಿಸಲಾಗಿದೆ.

ತಾ. 2 ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಾ ಸ್ಥಂಭ ಪೂಜೆಯೊಂದಿಗೆ ಉತ್ಸವ ಆರಂಭವಾಗಲಿದೆ. ತಾ. 3 ರಂದು ಅಪರಾಹ್ನ 12 ಗಂಟೆಗೆ ತಳಿಗೆ ಪೂಜೆ, ಕಾವಲು ದೇವತೆಗಳ ಪೂಜೆ ನಡೆಯಲಿದೆ.

ತಾ.4 ರಂದು ಸೋಮವಾರ ಬೆಳಿಗ್ಗೆ 7 ಗಂಟೆಗೆ ತಲಕಾವೇರಿಯಿಂದ ಶಕ್ತಿ ಆಹ್ವಾಹನೆ, ಅಭಿಷೇಕ ವಿಶೇಷ ಪೂಜೆÀ ನಡೆಯಲಿದೆ. ರಾತ್ರಿ 9 ಗಂಟೆಗೆ ಪ್ರಥಮ ಕಾಲದ ಅಭೀಷೇಕ ಪೂಜೆ ರಾತ್ರಿ 12 ಕ್ಕೆ ದ್ವಿತೀಯ ಕಾಲದ ಅಭೀಷೇಕ ತಾ:5 ರಂದು ಬೆಳಗಿನ ಜಾವ 4 ಗಂಟೆಗೆ ತೃತೀಯ ಕಾಲದ ಪೂಜೆ, 6 ಗಂಟೆಗೆ ಚತುರ್ಥ ಕಾಲದ ಪೂಜೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಅಲಂಕಾರ ಹಾಗೂ ಮಹಾಪೂಜಾ ಸೇವೆ ಜರುಗಲಿದ್ದು, ನಂತರ ಅನ್ನ ಸಂತರ್ಪಣೆ ನಡೆಯಲಿದೆ.

ಪಲ್ಲಕ್ಕಿ ಉತ್ಸವ

ಅಪರಾಹ್ನ 2.30 ಗಂಟೆಗೆ ಅಂಗಾಳ ಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿಯೊಂದಿಗೆ ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕೇರಳದ ಚಂಡೆ ಮದ್ದಳೆ, ಸ್ತಬ್ಧ ಚಿತ್ರ ಪ್ರದರ್ಶನ, ನಾದಸ್ವರ, ಪಂಚವಾದ್ಯ, ಹೆಣ್ಣು ಮಕ್ಕಳು ನವ ಧಾನ್ಯ ಕಳಶ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸುವದು, ರಾತ್ರಿ 8 ಗಂಟೆಗೆ ದೇವಿಯ ವಿಶೇಷ ಆರಾಧÀನೆ ನಡೆಯಲಿದೆ ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಶಂಕರಶೆಟ್ಟಿ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಅಧ್ಯಕ್ಷ ಟಿ.ಕೆ. ಶ್ರೀವಾಸ್ ಶೆಟ್ಟಿ , ಕಾರ್ಯದರ್ಶಿ ಲೊಕೇಶ್ ಶೆಟ್ಟಿ , ಸಹಕಾರ್ಯದರ್ಶಿ ಟಿ. ಮಂಜುನಾಥ್ ಖಜಾಂಚಿ ಗುರುನಾಥ್ ಶೆಟ್ಟಿ ಹಾಗೂ ಸಮಿತಿ ಸದಸ್ಯ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಓಂಕಾರೇಶ್ವರ

ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 4ರಂದು ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಯೊಂದಿಗೆ ರುದ್ರಹೋಮ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಪ್ರಮುಖರು ತಿಳಿಸಿದ್ದಾರೆ. ತಾ. 5ರ ಬೆಳಿಗ್ಗೆ ತನಕ ಎಂದಿನಂತೆ ದೇವತಾ ಕೈಂಕರ್ಯಗಳೊಂದಿಗೆ ಅಹೋರಾತ್ರಿ ಭಕ್ತರಿಗೆ ದರುಶನ ಅವಕಾಶ ಕಲ್ಪಿಸಲಾಗಿದೆ.

ಕಂಬಿಬಾಣೆ

ಸುಂಟಿಕೊಪ್ಪ : ಕಂಬಿಬಾಣೆ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಸೇವಾ ಸಮಿತಿವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ತಾ.4 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುವದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ ರೈ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.