ಮಡಿಕೇರಿ, ಫೆ. 28: ಸರಕಾರಿ ಪ್ರೌಢಶಾಲೆ ಕಿರಗಂದೂರು, ಜೆ.ಸಿ. ಬೋಸ್, ಇಕೋ ಕ್ಲಬ್ ಮತ್ತು ಜಾಗೃತಿ ಸಂಸ್ಥೆ ಬೆಂಗಳೂರು, ಸಿಸ್‍ಕೋ ಕಂಪೆನಿ ಬೆಂಗಳೂರು ವತಿಯಿಂದ ‘ಪ್ರಕೃತಿ ಮಡಿಲು-ಉಳಿಸಿ ಪರಿಸರ’ ಕಾರ್ಯಕ್ರಮದ ಅಡಿಯಲ್ಲಿ ವಿನೂತನ ಕಾರ್ಯಕ್ರಮ ನಡೆಯಿತು.

ಸರಕಾರಿ ಪ್ರೌಢಶಾಲೆ ಕಿರಗಂದೂರುವಿನಲ್ಲಿ ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿ ಮಕ್ಕಳಿಗೆ ಇಂಜಿನಿಯರ್ ಕಿರಣ್ ಅವರು ಪ್ಲಾಸ್ಟಿಕ್ ಅಪಾಯಗಳ ಬಗ್ಗೆ ತಿಳಿಸಿದರು. ಪ್ಲಾಸ್ಟಿಕ್ ಬಳಕೆ ಮಾಡುವಾಗ ವಹಿಸಬೇಕಾದ ಎಚ್ಚರಿಕೆ ಮತ್ತು ಪರಿಸರಕ್ಕೆ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಮಕ್ಕಳಿಗೆ ವೃತ್ತಿ ಮಾರ್ಗ ದರ್ಶನವನ್ನು ನಂಜುಂಡಸ್ವಾಮಿ ಮತ್ತು ದೀಪಕ್ ತಿಳಿಸಿದರು. 10 ಮಂದಿ ಸಿಎಸ್‍ಕೋ ಕಂಪೆನಿ ಇಂಜಿನಿಯರ್‍ಗಳ ನೇತೃತ್ವದಲ್ಲಿ ಶಾಲಾ ಮಕ್ಕಳನ್ನು ಗುಂಪು ಮಾಡಿ ಅವರಿಗೆ ಪರಿಸರದ ಚಿತ್ರ ಬಿಡಿಸಿ ಮಂಡನೆಗೆ ಅವಕಾಶ ನೀಡಲಾಯಿತು.

ಇದರೊಂದಿಗೆ ಕೋಟೆ ಬೆಟ್ಟಕ್ಕೆ ಚಾರಣ ತೆರಳಿ ಅಲ್ಲಿನ ಜೀವ ವೈವಿಧ್ಯ ದಾಖ ಲೀಕರಣ ನಡೆಸಲಾಯಿತು. ಮಳೆ ಯಿಂದ ಹಾನಿಗೊಳಗಾದ ಬೆಟ್ಟಗಳ ಬಗ್ಗೆ ಅಧ್ಯಯನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಾಗೃತಿ ಸಂಸ್ಥೆಯ ಕಣ್ಣನ್, ಕಾರ್ಯಕ್ರಮ ಸಂಯೋಜಕ ನಂಜುಂಡಸ್ವಾಮಿ, ಗೋಯಲ್, ದೀಪಕ್ ಹಾಗೂ ಸಿಎಸ್‍ಕೋ ಇಂಜಿನಿಯರ್‍ಗಳಾದ ಹರ್ಷ, ನಿತಿನ್, ಬ್ಲೆಸ್ಸಿ, ಸುಷ್ಮಾ, ಸಂಜನ, ಮೋನಿಸ್, ಅನಿಶ್, ಶಕೀಲ್, ಪ್ರಾಚಿ ಗೌರವ್, ಕಿರಣ್ ಜೆ.ಸಿ. ಬೋಸ್, ಪರಿಸರ ಸಂಘದ ಸಂಚಾಲಕ ಇ. ಸುಲೇಮಾನ್, ಮುಖ್ಯ ಶಿಕ್ಷಕ ಡಿ.ಸಿ. ಧರ್ಮಪ್ಪ, ಮನು, ಶಿಕ್ಷಕರಾದ ಎ. ವಿಜು, ಕೆ.ಜೆ. ರಶ್ಮಿ, ಹೆಚ್.ಎಂ. ರಮೇಶ್, ಎಸ್.ಹೆಚ್. ಮಂಜುನಾಥ್ ಮಾರ್ಗದರ್ಶನ ನೀಡಿದರು.