ವೀರಾಜಪೇಟೆ, ಫೆ. 28: ಮಹಿಳೆಯರಿಗೆ ಕಾನೂನಿನಲ್ಲಿ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಆ ಹಕ್ಕುಗಳು ಪ್ರತಿಯೊಬ್ಬ ಮಹಿಳೆಗೂ ಅತ್ಯಮೂಲ್ಯ ಎಂದು ವೀರಾಜಪೇಟೆಯ ವಕೀಲರಾದ ಅನುಪಮ ಬಿ. ಕಿಶೋರ್ ಅಭಿಪ್ರಾಯಪಟ್ಟರು. ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನ ಮಹಿಳಾ ದೌರ್ಜನ್ಯ ನಿರ್ಮೂಲನಾ ಘಟಕ ಮತ್ತು ಮಹಿಳಾಭಿವೃದ್ಧಿ ಘಟಕದ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೇದಿಕೆಯಲ್ಲಿ ಕಾಲೇಜಿನ ಮಹಿಳಾ ದೌರ್ಜನ್ಯ ನಿರ್ಮೂಲನಾ ಘಟಕದ ಸಂಚಾಲಕಿ ಎಸ್ ಸುನೀತಾ ಮತ್ತು ಮಹಿಳಾಭಿವೃದ್ದಿ ಘಟಕದ ಮುತ್ತಮ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿ ಹುದಾ ಸ್ವಾಗತಿಸಿದರೆ, ರಿಹಾ ನಿರೂಪಿಸಿ ಪೂನಂ ವಂದಿಸಿದರು.