ಕುಶಾಲನಗರ, ಫೆ. 28: ಕುಶಾಲನಗರ ಕಾವೇರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಗುಮ್ಮನ ಕೊಲ್ಲಿಯ ಡೈಮಂಡ್ ಕ್ರಿಕೆಟರ್ಸ್ ಪ್ರಥಮ ಸ್ಥಾನಗಳಿಸಿ ರೂ. 60 ಸಾವಿರ ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕುಶಾಲನಗರದ ತಾಜ್ ಯೂತ್ ಕ್ಲಬ್ ದ್ವಿತೀಯ ಸ್ಥಾನದೊಂದಿಗೆ ರೂ. 40 ಸಾವಿರ ನಗದು ಮತ್ತು ಟ್ರೋಫಿ ಪಡೆದು ಕೊಂಡಿದೆ.

ಸ್ಥಳೀಯ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಜಿಲ್ಲೆಯ ವಿವಿಧೆಡೆಗಳ 10 ತಂಡಗಳು ಪಾಲ್ಗೊಂಡಿದ್ದವು. ಕುಶಾಲನಗರದ ರಂಜಿತ್ ಫ್ರೆಂಡ್ಸ್ ತೃತೀಯ ಸ್ಥಾನ, ಕೊಡಗು ಜಿಲ್ಲಾ ಪೊಲೀಸ್ ಉತ್ತಮ ತಂಡ, ತಾಜ್ ಟೀಂನ ನಿಖಿಲ್ ಆಲ್‍ರೌಂಡರ್, ಡೈಮಂಡ್ ಕ್ರಿಕೆಟರ್ಸ್‍ನ ನಾಸಿರ್ ಮ್ಯಾನ್ ಆಫ್ ದಿ ಸೀರಿಸ್, ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಸ್ಯಾಂಡಿ, ರಂಜಿತ್ ಅಟಾಕರ್ಸ್ ತಂಡದ ಆಫ್ರಿದ್ ಉತ್ತಮ ಬ್ಯಾಟ್ಸ್‍ಮೆನ್, ಪ್ರಭಾ ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದುಕೊಂಡರು.