ಚೆಟ್ಟಳ್ಳಿ, ಫೆ. 28: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೋಮವಾರಪೇಟೆ ಪಶು ಸಂಗೋಪನಾ ಹಾಗೂ ಪಶು ವೈದ್ಯ ಇಲಾಖೆ ಆಶ್ರಯದಲ್ಲಿ ವಾಲ್ನೂರು ಬಸವೇಶ್ವರ ದೇವಾಲಯದ ಬಳಿ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರ ನೆರವೇರಿತು.
ವಾಲ್ನೂರು-ತ್ಯಾಗತ್ಯೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ವಾಲ್ನೂರು-ತ್ಯಾಗತ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಕೆ. ನಾಗರತ್ನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 60 ದನ-ಕರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಗೂ 30 ಶ್ವಾನಗಳಿಗೆ ಲಸಿಕೆ ನೀಡಲಾಯಿತು. ಸೋಮವಾರಪೇಟೆ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಕೆ. ನಾಗರಾಜ್ ಇಲಾಖೆಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ ಉತ್ತಮ ತಳಿಯ ಹಸು ಹಾಗೂ ಕರುಗಳಿಗೆ ಬಹುಮಾನ ನೀಡಲಾಯಿತು. ಪರಿಶಿಷ್ಟ ಜಾತಿ ಹಾಗೂ ಪಂಗಡದವರ ರಾಸುಗಳಿಗೆ ಮೂರು ವರ್ಷ ಉಚಿತ ಜಾನುವಾರು ವಿಮೆಯನ್ನು ನೀಡಲಾಯಿತು. ವಾಲ್ನೂರು-ತ್ಯಾಗತ್ಯೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಜೆ.ಆರ್. ಭುವನೇಂದ್ರ, ಹೆಚ್. ಎನ್ ಕಮಲಮ್ಮ, ಕವಿತ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ ಪ್ರಾರ್ಥಿಸಿದರು. ಚೆಟ್ಟಳ್ಳಿ ಪಶು ಆರೋಗ್ಯಾಧಿಕಾರಿ ಡಾ. ಸಂಜೀವ ಕುಮಾರ್ ಆರ್ ಶಿಂಧೆ ಸ್ವಾಗತಿಸಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕÀ ಲಿಂಗರಾಜು ವಂದಿಸಿದರು.