ಸುಂಟಿಕೊಪ್ಪ, ಫೆ. 28: ಕಳೆದ 19 ವರ್ಷಗಳಿಂದ ಸತತವಾಗಿ ಜಾತಿ, ಮತ, ಧರ್ಮ ಬೇಧವಿಲ್ಲದೆ ಗ್ರಾಮೀಣ ಕ್ರೀಡಾಕೂಟವನ್ನು ನಡೆಸುತ್ತಾ ಜನರನ್ನು ಒಗ್ಗೂಡಿಸುತ್ತಾ ಸಮಾಜಮುಖಿ ಕೆಲಸದಲ್ಲಿ ನಾಕೂರು ಫ್ರೆಂಡ್ಸ್ ಯೂತ್ ಕ್ಲಬ್ ತೊಡಗಿರುವದು ಶ್ಲಾಘನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಹೇಳಿದರು.ನಾಕೂರು-ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾದ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘ-ಸಂಸ್ಥೆಗಳು ಹುಟ್ಟುವದು ಸುಲಭ, ಅದನ್ನು ಉಳಿಸಿಕೊಂಡು ಹೋಗುವದು ಕಷ್ಟವೆಂದು ನೆನಪಿಸಿದರು. ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ನಾಕೂರು-ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಡಿ. ಮಣಿ ಮಹಿಳೆಯರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಜಿ.ಪಂ. ಅಧ್ಯಕ್ಷ ಹಾಗೂ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ಕ್ರೀಡಾಕೂಟದಲ್ಲಿ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
ವೇದಿಕೆಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಚೆನ್ನಮ್ಮ, ಅಂಬೆಕಲ್ ಚಂದ್ರು, ಕಾನ್‍ಬೈಲ್ ತೋಟದ ವ್ಯವಸ್ಥಾಪಕ ಪಿ.ಜಿ. ಹೆಗ್ಡೆ, ಕಾಫಿ ಬೆಳೆಗಾರರಾದ ಎ.ಪಿ. ಧರ್ಮಪ್ಪ, ನೀಲಮ್ಮ ಪೆಮ್ಮಯ್ಯ, ಲಿಲ್ಲಿ ಸೋಮಯ್ಯ, ಡೀನಾ ಈರಪ್ಪ ಉಪಸ್ಥಿತರಿದ್ದರು.
ನಾಕೂರು-ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಅಜಿತ್ ಸ್ವಾಗತಿಸಿ, ನಿರೂಪಿಸಿ ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಶಂಕರನಾರಾಯಣ ವಂದಿಸಿದರು.