ಮಡಿಕೇರಿ, ಫೆ. 28: ಸುಂಟಿಕೊಪ್ಪ ಜೇಸಿಐ ಸಂಸ್ಥೆಯ ವತಿಯಿಂದ ಸುಂಟಿ ಕೊಪ್ಪದ ಶ್ರೀರಾಮ ಮಂದಿರದಲ್ಲಿ ಎಲ್ಡಿಎಂಟಿ ತರಬೇತಿ ಕಾರ್ಯಕ್ರಮ ನಡೆಯಿತು. ವಲಯ ಉಪಾಧ್ಯಕ್ಷ ಜೇಸಿ ಪ್ರವೀಣ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಜೇಸಿಐನ ಅಧ್ಯಕ್ಷ ಅಶೋಕ್ ನಿಡ್ಯಮಲೆ, ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಸುರೇಶ್ ಕುಶಾಲಪ್ಪ, ಮಾಜಿ ವಲಯ ಉಪಾಧ್ಯಕ್ಷ ದೇವಿಪ್ರಸಾದ್ ಮತ್ತಿತರರು ಹಾಜರಿದ್ದರು.