ವಿರಾಜಪೇಟೆ, ಫೆ. 28: ನಗರದ ತಾಲೂಕು ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಕಾಲ್ಚೆಂಡು ಪಂದ್ಯಾವಳಿಯಲ್ಲಿ 3-2 ಗೋಲುಗಳ ಅಂತರದಲ್ಲಿ ಕೊಡಗು ಎಫ್.ಸಿ. ಪಾಲಿಬೆಟ್ಟ ತಂಡವು ಜಯಗಳಿಸಿತು. ಅಮ್ಮತ್ತಿ ಮಿಲನ್ ಎಫ್ಸಿ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು.
ವೀರಾಜಪೇಟೆ ನಗರದ ಕ್ಲಬ್ ಕೂರ್ಗ್ ಕೇಬಲ್ ಬಾಯ್ಸ್ ಸಂಸ್ಥೆಯು ತೃತೀಯ ವರ್ಷದ ರಾಜ್ಯಮಟ್ಟದ ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟವನ್ನು ತಾಲೂಕು ಮೈದಾನದಲ್ಲಿ ಆಯೋಜಿಸಿತ್ತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಾದಂಡ ಎಸ್. ಪೂವಯ್ಯ ಪಟ್ಟಣ ಪಂಚಾಯಿತಿಯ ಸದಸ್ಯರಾದ ಮೊಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ, ರಾಜೇಶ್ ಪದ್ಮಾನಾಭ, ಉದ್ಯಮಿ ಕಾಳೆಂಗಡ ರಮೇಶ್, ಸಲೀಂ, ಶÀರೀಫ್, ಮೆಗ್ನೋಲಿಯ ರೆಸಾರ್ಟ್ ಮ್ಯಾನೇಜರ್ ಪ್ರವೀಣ್, ಸಂಸ್ಥೆಯ ಅಧ್ಯಕ್ಷ ಶೆಹನಾಜ್ ಕಾರ್ಯದರ್ಶಿ ಅಭಿನವ್ ಉಪಸ್ಥಿತರಿದ್ದರು.
ವಿಜೇತ ತಂಡಕ್ಕೆ ರೂ. 25,555 ನಗದು ಮತ್ತು ಪಾರಿತೋಷಕ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 15,555 ನಗದು ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು. ಭರವಸೆಯ ಆಟಗಾರ ಮತ್ತು ಉತ್ತಮ ಸ್ಟೈಕರ್ ಪ್ರಶಸ್ತಿಯನ್ನು ಪಾಲಿಬೆಟ್ಟ ತಂಡದ ಜುನೈದ್, ಉತ್ತಮ ಮುನ್ನಡೆ ಅಟಗಾರ ಸುದೇಶ್, ಪಂದ್ಯಾವಳಿಯ ಉತ್ತಮ ತಂಡ ನೆಹರು ಎಫ್.ಸಿ. ಪಾಲಿಬೆಟ್ಟ, ಪಂದ್ಯ ಪುರುಷೋತ್ತಮ ಜುನೈದ್, ಸರಣಿ ಶ್ರೇಷ್ಠ ಪ್ರಶಸ್ತಿ ನಾಸಿರ್ಗೆ ಲಭಿಸಿತು. ಪಂದ್ಯಾಟದ ತಿರ್ಪುಗಾರರಾಗಿ ದೈಹಿಕ ಶಿಕ್ಷಕರಾದ ಅಶ್ವಥ್ ಮತ್ತು ಪ್ರತಾಪ್ ಕಾರ್ಯನಿರ್ವಹಿಸಿದರು. ಸಂಸ್ಥೆಯ ಸದಸ್ಯರು ಮತ್ತು ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.