ಸೋಮವಾರಪೇಟೆ, ಫೆ. 28: ಸಮೀಪದ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸರ್ವ ಧರ್ಮ ಕ್ಷೇತ್ರದಲ್ಲಿ ಶ್ರೀ ವೀರಭದ್ರ ದೇವರು ಮತ್ತು ಪರಿವಾರದ ದೇವತೆಗಳಾದ ರಕ್ತೇಶ್ವರಿ ದೇವಿ, ನಾಗದೇವರು, ಗುಳಿಗದೈವ ಮತ್ತು ಪಂಜುರ್ಲಿ ದೈವದ ಪ್ರತಿಷ್ಠಾಪನೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಪುತ್ತೂರು ನರಿಮೊಗರು ಗ್ರಾಮದ ಜ್ಯೋತಿಷಿ ಶ್ರೀ ವರ್ಧಮಾನ್ ಜೈನ್ ಗುರುಗಳ ನೇತೃತ್ವದಲ್ಲಿ ಹೋಮ ಹವನಗಳು ನಡೆದವು. ಇದೇ ಸಂದರ್ಭ ಸಮುದಾಯ ಭವನದ ಅಡುಗೆ ಮನೆ ನಿರ್ಮಿಸಲು ಅನುದಾನ ಕಲ್ಪಿಸಿದ ಜಿ. ಪಂ. ಸದಸ್ಯ ಬಿ.ಜೆ. ದೀಪಕ್ ಹಾಗೂ ತಾಲೂಕು ಪಂ. ಸದಸ್ಯೆ ಕುಸುಮಾ ಅಶ್ವತ್ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಆರ್. ಮುತ್ತಣ್ಣ, ದಾನಿಗಳಾದ ಚಾಮೇರ ಪವನ್ ದೇವಯ್ಯ, ಗುಲಾಬಿ ರೈ, ಸ್ಮಿತ ರವಿಕುಮಾರ್, ಯಶೋಧ ಚಂದ್ರಶೇಖರ್ ಆಚಾರ್ಯ, ಪ್ರಮುಖರಾದ ಹೆಚ್.ಎಸ್. ಕೊಮಾರಿಗೌಡ, ಕೆ.ಎಸ್. ಮೋಹನ್, ಜಿ.ಎ. ಮಹೇಶ್, ವಿಶ್ವರೂಪ ಆಚಾರ್ಯ, ಟಿ.ಆರ್. ರಾಮಚಂದ್ರ, ನಾಗರಾಜ್, ಫ್ರಾನ್ಸಿಸ್ ಡಿಸೋಜ, ದಿನೇಶ್ ಇದ್ದರು.