ಸುಂಟಿಕೊಪ್ಪ, ಫೆ. 28: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಪ್ರತಿಯೊಂದು ಮನೆಮನೆಗಳನ್ನು ಬೆಳಗಲಿ ಎಂಬ ಧ್ಯೇಯ ವಾಕ್ಯದಡಿ ಕಮಲ ಜ್ಯೋತಿ ಕಾರ್ಯಕ್ರಮಕ್ಕೆ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಚಾಲನೆ ನೀಡಲಾಯಿತು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿದರು.
ಗ್ರಾ.ಪಂ. ಸದಸ್ಯರಾದ ಸಿ. ಚಂದ್ರ, ಬಿ.ಎಂ. ಸುರೇಶ್, ಗಿರಿಜಾ ಉದಯಕುಮಾರ್, ಜ್ಯೋತಿ, ಯುವ ಮೋರ್ಚಾ ಅಧ್ಯಕ್ಷ ರಂಜತ್ ಪೂಜಾರಿ, ಬಿಜೆಪಿ ನಗರ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಮುಖಂಡರಾದ ಬಿ.ಎಸ್. ಅಶೋಕ್ ಶೇಟ್, ನಾಗೇಶ್ ಪೂಜಾರಿ, ಬಿ.ಕೆ. ಮೋಹನ್, ರಾಕೇಶ್, ಅಶೋಕ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ಸೋಮವಾರಪೇಟೆ: ಭಾರತೀಯ ಜನತಾ ಪಾರ್ಟಿಯ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಕಮಲ ಜ್ಯೋತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಭುವನೇಶ್ವರಿ ಮಾತನಾಡಿದರು.
ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ಪ.ಪಂ. ಸದಸ್ಯೆ ನಳಿನಿ ಗಣೇಶ್, ಪಕ್ಷದ ಕಾರ್ಯಕರ್ತೆಯರಾದ ದಾಕ್ಷಾಯಿಣಿ, ಉಷಾ ತೇಜಸ್ವಿ, ಲೀಲಾ ನಿರ್ವಾಣಿ, ಸುಮಾ ಸುದೀಪ್, ಗ್ರಾ.ಪಂ. ಸದಸ್ಯೆ ಮಂಜುಳಾ ಸುಬ್ರಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.