ವೀರಾಜಪೇಟೆ, ಫೆ. 28: ನಗರದ ತಾಲೂಕು ಮೈದಾನದಲ್ಲಿ ಮೂರು ದಿನಗಳಿಂದ ಕಾಲ್ಚೆಂಡು ಪಂದ್ಯಾವಳಿ ಅಯೋಜನೆಗೊಂಡು ಅಂತಿಮ ದಿನದ ಪಂದ್ಯಾಟದಲ್ಲಿ ಕೊಡಗು ಎಫ್.ಸಿ. ಪಾಲಿಬೆಟ್ಟ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿತು.
ವೀರಾಜಪೇಟೆ ನಗರದ ಕೂರ್ಗ್ ಕೇಬಲ್ ಬಾಯ್ಸ್ ಸಂಸ್ಥೆಯ ತೃತೀಯ ವರ್ಷದ ರಾಜ್ಯ ಮಟ್ಟದ ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟಗಳನ್ನು ತಾಲೂಕು ಮೈದಾನದಲ್ಲಿ ಅಯೋಜಿಸಿತ್ತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಮಾದಂಡ ಎಸ್. ಪೂವಯ್ಯ ಅವರು ಜಿಲ್ಲೆಯಲ್ಲಿ ಕ್ರೀಡೆಗೆ ಪೂರಕ ವಾತಾವರಣವಿದ್ದು, ಹಲವು ಗ್ರಾಮೀಣ ಪ್ರತಿಭೆಗಳು ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದÀರ್ಶನ ಮಾಡುವಲ್ಲಿ ಸ್ಥಳಿಯ ಕ್ರೀಡಾ ಸಂಸ್ಥೆಗಳು ಸಹಕಾರಿಯಾಗಿವೆ. ದಾನಿಗಳು ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಸಂಸ್ಥೆಗಳಿಗೆ ಹೆಚ್ಚಿನ ಸಹಾಕಾರ ನೀಡಿದಲ್ಲಿ ಕ್ರೀಡೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ಉದ್ಯಮಿ ಕಾಳೇಂಗಡ ರಮೇಶ್, ಸಲೀಂ, ಷರೀಫ್, ಮೆಗ್ನೋಲಿಯ ರೇಸೊರ್ಟ್ ಮ್ಯಾನೇಜರ್ ಪ್ರವೀಣ್, ಸಂಸ್ಥೆಯ ಅಧ್ಯಕ್ಷ ಶೆಹನಾಜ್, ಕಾರ್ಯದÀರ್ಶಿ ಅಭಿನವ್ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಜಿಲ್ಲೆಯಲ್ಲದೆ ನೆರೆಯ ಕೇರಳ ರಾಜ್ಯದ ಮೂರು ತಂಡಗಳು, ಬೆಂಗಳೂರಿನ ಒಂದು ತಂಡ ಸೇರಿದಂತೆ ಒಟ್ಟು 31 ತಂಡಗಳು ಭಾಗವಹಿಸಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯವು ಕೊಡಗು ಎಫ್.ಸಿ. ಪಾಲಿಬೆಟ್ಟ ಮತ್ತು ಸಿ.ಸಿ.ಬಿ. ವೀರಾಜಪೇಟೆ ತಂಡಗಳ ಮಧ್ಯೆ ನಡೆದು ಕೊಡಗು ಎಫ್.ಸಿ. ಪಾಲಿಬೆಟ್ಟ ತಂಡ 2-1 ಗೋಲುಗಳಿಂದ ವಿಜಯವಾಯಿತು. ದ್ವಿತೀಯ ಸೆಮಿಫೈನಲ್ ಪಂದ್ಯವು ಎಂ.ವೈ.ಸಿ.ಸಿ. ಮಡಿಕೇರಿ ಮತ್ತು ಮಿಲನ್ ಎಫ್.ಸಿ. ಅಮ್ಮತ್ತಿ ತಂಡಗಳ ಮಧ್ಯೆ ನಡೆದು ಮಿಲನ್ ಅಮ್ಮತ್ತಿ ತಂಡವು ಫೈನಲ್ ಪ್ರವೇಶ ಮಾಡಿತು. ಫೈನಲ್ ಪ್ರವೇಶ ಮಾಡಿದ ಕೊಡಗು ಎಫ್.ಸಿ. ಪಾಲಿಬೆಟ್ಟ ಮತ್ತು ಮಿಲನ್ ಎಫ್.ಸಿ. ಅಮ್ಮತ್ತಿ ತಂಡಗಳ ಮಧ್ಯೆ ಹಣಾಹಣಿ ನಡೆದು ಪೂರ್ಣ ಅವಧಿಯಲ್ಲಿ ಉಭಯ ತಂಡಗಳು ಗೋಲುಗಳಿಸಲು ಶಕ್ತವಾಗದೇ ತೀರ್ಪುಗಾರರ ನಿರ್ಧಾರದಂತೆ ಉಭಯ ತಂಡಗಳಿಗೆ ಪೆನಾಲ್ಟಿ ಸ್ಟ್ರೋಕ್ ನೀಡಲಾಗಿ ಪಾಲಿಬೆಟ್ಟ ತಂಡವು 3-2 ಗೋಲುಗಳಿಂದ ಅಮ್ಮತ್ತಿ ತಂಡವನ್ನು ಮಣಿಸಿ ಜಯಗಳಿಸಿತು. ವಿಜಯ ತಂಡಕ್ಕೆ 25,555 ರೂ. ನಗದು ಮತ್ತು ಪಾರಿತೋಷಕ, ದ್ವಿತೀಯ ಸ್ಥಾನಕ್ಕೆ 15,555 ರೂ. ನಗದು ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು.
ಭರವಸೆಯ ಅಟಗಾರ ಮತ್ತು ಉತ್ತಮ ಸ್ಟ್ರೈಕರ್ ಪ್ರಶಸ್ತಿಯನ್ನು ಪಾಲಿಬೆಟ್ಟ ತಂಡದ ಜುನೈದ್, ಉತ್ತಮ ಮುನ್ನಡೆ ಅಟಗಾರ ಸುದೇಶ್, ಪಂದ್ಯಾವಳಿಯ ಉತ್ತಮ ತಂಡ ನೆಹರು ಎಫ್.ಸಿ. ಪಾಲಿಬೆಟ್ಟ, ಪಂದ್ಯ ಪುರುಷೋತ್ತಮ ಜುನೈದ್ ಸರಣಿ ಶ್ರೇಷ್ಠ ಪ್ರಶಸ್ತಿ ನಾಸಿರ್ ಅವರುಗಳು ವೈಯುಕ್ತಿಕ ಪ್ರಶಸ್ತಿ ಪಡೆದುಕೊಂಡರು. ಪಂದ್ಯಾಟದ ತೀರ್ಪುಗಾರರಾಗಿ ದೈಹಿಕ ಶಿಕ್ಷಕರಾದ ಅಶ್ವಥ್ ಮತ್ತು ಪ್ರತಾಪ್ ಕಾರ್ಯನಿರ್ವಹಿಸಿದರು. ಸಂಸ್ಥೆಯ ಸದಸ್ಯರು ಮತ್ತು ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.