ಮಡಿಕೇರಿ, ಫೆ. 28: ನೇಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ನ ಕೊಡಗು ಜಿಲ್ಲಾ ಶಾಖೆ ಮತ್ತು ಪೆರವಾಜೆಯ ಮಹಿಳಾ ಆರೋಗ್ಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬೆಳ್ಳಾರೆ ಸಮೀಪದ ಪೆರವಾಜೆಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ವೈದ್ಯರಾದ ಡಾ. ಎ.ಆರ್. ರಾಜಾರಾಮ್, ಡಾ. ಜ್ಯೋತಿ ರಾಜಾರಾಮ್ ಮತ್ತು ಡಾ. ಜೀವನ ಪ್ರಕಾಶ ರೈ ಮಕ್ಕಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರು. ಆರೋಗ್ಯ ರಕ್ಷಿಸುವ ವಿವಿಧ ವಿಧಾನಗಳನ್ನು ತಿಳಿಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶಕುಂತಲಾ ಮತ್ತಿತರರು ಹಾಜರಿದ್ದರು.