ಮಡಿಕೇರಿ, ಫೆ.27 : ಬೆಂಗಳೂರು ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಮಾರ್ಚ್ 1 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಎಫ್.ಎಂ.ಸಿ ಕಾಲೇಜು ಆವರಣ ಮತ್ತು ಆಡಿಟೋರಿಯಂನಲ್ಲಿ “ಅಭಿರಂಗ” ಮಕ್ಕಳ ನಾಟಕೋತ್ಸವ ನಡೆಯಲಿದೆ.

ನಿನಾಸಂ ರಂಗ ತಂಡದಿಂದ ತರಬೇತಿ ಪಡೆದ ಬಾಲಕರ ಬಾಲಮಂದಿರ ಮಡಿಕೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಿಕೇರಿ, ಗಿರಿಜನ ಆಶ್ರಮ ಶಾಲೆ ಬಸವನಹಳ್ಳಿ, ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳಿಂದ ಸಂಬಂಧದ ಆಟ, ಬಾಲ್ಯ ವಿವಾಹ ನಿಲ್ಲಿಸಿ ಬಾಲ್ಯವನ್ನು ರಕ್ಷಿಸಿ ಮತ್ತು ಪ್ರಾಕೃತಿಕ ವಿಕೋಪ ಎಂಬ ಬೀದಿನಾಟಕ ಹಾಗೂ ಗುಬ್ಬಿ ಹಾಡು, ಹೆಬ್ಬಾಲ, ಎಂಬ ರಂಗಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.