ಮಡಿಕೇರಿ, ಫೆ. 27: ಕರ್ತವ್ಯ ಲೋಪದ ಆರೋಪದಡಿ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಗಳು ಅಮಾನತಿಗೊಳಗಾಗಿದ್ದಾರೆ. ದಕ್ಷಿಣ ಕೊಡಗಿನ ಕುಟ್ಟ ಗೇಟ್ ಮೂಲಕ ಅಕ್ರಮವಾಗಿ ಮರಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿಯನ್ನು ಪರಿಶೀಲನೆ ನಡೆಸದೆ ಸಾಗಲು ಸಹಕಾರ ನೀಡಿದ್ದಲ್ಲದೆ, ಲಾರಿಯಲ್ಲಿ ತುಂಬಿದ್ದುದು ಭತ್ತ ಎಂದು ದಾಖಲು ಪುಸ್ತಕದಲ್ಲಿ ನಮೂದಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರಣ್ಯ ರಕ್ಷಕ ಮೂರ್ತಿ ಹಾಗೂ ಅರಣ್ಯ ಪಾಲಕ ಗಾಂಧಿ ಎಂಬವರುಗಳನ್ನು ಇಲಾಖೆಯ ಅಧಿಕಾರಿಗಳು ಸೇವೆಯಿಂದ ಅಮಾನತ್ತುಗೊಳಿಸಿದ್ದಾರೆ.