ಸುಂಟಿಕೊಪ್ಪ, ಫೆ. 27: ಜಮ್ಮು ಕಾಶ್ಮೀರದ ಲೈನ್ ಆಫ್ ಕಂಟ್ರೋಲ್ ದಾಟಿ ಹೋದ ಭಾರತೀಯ ವಾಯುಪಡೆಯು ಸರ್ಜಿಕಲ್ ದಾಳಿ ನಡೆಸಿ ಪಾಕ್ ಆಕ್ರಮಿತ ಪಾಕಿಸ್ತಾನದ ನೆಲದಲ್ಲೇ ಜೈಷ್ ಉಗ್ರರ ಅಡಗುತಾಣಗಳ ಮೇಲೆ ಧಾಳಿ ನಡೆಸಿ ಸುಮಾರು 300 ಮಂದಿ ಉಗ್ರರನ್ನು ಸದೆಬಡೆದಿರುವದಕ್ಕೆ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ವಿ.ಹಿಂ.ಪ. ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ,ಗ್ರಾಮ ಪಂಚಾಯಿತಿ ಸದಸ್ಯರಾದ ಗಿರಿಜಾ ಉದಯಕುಮಾರ್, ಸಿ.ಚಂದ್ರ,ಜ್ಯೋತಿ, ಬಿ,ಎಂ.ಸುರೇಶ್,ಯುವ ಮೋರ್ಚಾ ಅಧ್ಯಕ್ಷ ರಂಜಿತ್‍ಪೂಜಾರಿ, ಪ್ರಮುಖರಾದ ನಾಗೇಶ್ ಪೂಜಾರಿ, ಫೆಲಿಕ್ಸ್, ಅಶೋಕ್, ಸುರೇಶ್ ಗೋಪಿ, ರಮೇಶ್, ಸಿ.ಸಿ.ಸುನಿಲ್, ರಾಕೇಶ್ ಇತರರು ಇದ್ದರು.

ಮಾದಾಪುರ: ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ವೈಮಾನಿಕ ಧಾಳಿ ನಡೆಸಿದಕ್ಕೆ ಮಂಗಳವಾರ ರಾತ್ರಿ ಮಾದಾಪುರ ದಲ್ಲೂ ಹಿಂದೂ ಜಾಗರಣಾ ವೇದಿಕೆ, ಸಾರ್ವಜನಿಕರು, ನಿವೃತ್ತ ಯೋಧರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಿಂದೂ ಜಾಗರಣಾ ವೇದಿಕೆಯ ಸುನಿಲ್, ಕೇಶವ, ರಜಿಶ್, ಮಧು, ಸೂರಜ್ ಸೇರಿದಂತೆ ಇತರರು ಇದ್ದರು.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದರು.ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ವಾಯು ಸೇನೆಯ ಕಾರ್ಯಾಚರಣೆಯನ್ನು ಬೆಂಬಲಿಸಿ ಘೋಷಣೆ ಕೂಗಿದ ಸಾರ್ವಜನಿಕರು, ಪಾಕಿಸ್ತಾನಿ ಪ್ರೇರಿತ ಉಗ್ರಗಾಮಿಗಳ ವಿರುದ್ಧ ಇನ್ನಷ್ಟು ಕಾರ್ಯಾಚರಣೆ ನಡೆಯಬೇಕೆಂದು ಆಶಿಸಿದರು.

ಭಯೋತ್ಪಾದಕರ ಮೇಲಿನ ಸೇನಾ ಕಾರ್ಯಾಚರಣೆಯನ್ನು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಸುಭಾಷ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಕರ್ಕಳ್ಳಿ ರವಿ, ಪ್ರಮುಖರಾದ ಮನೋಹರ್, ಪದ್ಮನಾಭ್, ನಂದ, ಸುಧಾಕರ್ ಶೆಟ್ಟಿ, ಎನ್.ಎಸ್. ಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತೋಳೂರುಶೆಟ್ಟಳ್ಳಿಯಲ್ಲಿ: ತೋಳೂರು ಶೆಟ್ಟಳ್ಳಿಯಲ್ಲಿ ಗ್ರಾಮಸ್ಥರು ಸ್ವಾಗತಿಸಿ, ಸಂಭ್ರಮಿಸಿದರು. ಗ್ರಾಮದ ಜಂಕ್ಷನ್‍ನಲ್ಲಿ ಪಟಾಕಿ ಸಿಡಿಸಿ ಪಾಕಿಸ್ತಾನದ ವಿರುದ್ಧ ಧಿಕ್ಕಾರ, ಭಾರತೀಯ ಸೇನೆಯ ಪರ ಜಯಘೋಷ ಮೊಳಗಿಸಿದರು. ಪ್ರಮುಖರಾದ ರಜಿತ್, ಸುಧಾಕರ್, ವಿಜಯಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಆಲೂರು ಸಿದ್ದಾಪುರ: ಮುಳ್ಳೂರು ಗ್ರಾಮದಲ್ಲಿ ಹಿಂದೂಪರ ಸಂಘಟನೆ ವಿಜಯೋತ್ಸವ ಆಚರಿಸಿದರು. ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾರತದ ಯೋಧರಿಗೆ ಮತ್ತು ವೈಮಾನಿಕ ದಾಳಿ ನಡೆಸಿ ಉಗ್ರರನ್ನು ಸದೆ ಬಡೆದ ವಾಯುಸೇನೆಯ ಯೋಧರಿಗೆ ಜಿಂದಬಾದ್, ಜೈ ಭಾರತಾಂಬೆ ಘೋಷಣೆಗಳನ್ನು ಕೂಗಿದರು. ಬಳಿಕ ಮುಳ್ಳೂರು ಜಂಕ್ಸನ್‍ನಲ್ಲಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮ ಪಡುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಪ್ರಮುಖರಾದ ರಾಜೇಶ್, ಪೃಥ್ವಿ, ಉದಯ್, ಸಂತೋಷ್, ಸಂದೀಪ್, ಯೋಗೇಶ್, ಸತ್ಯವೇಲು ಮುಂತಾದವರಿದ್ದರು.

ಚೆಟ್ಟಳ್ಳಿ : ಭಾರತೀಯ ಸೈನ್ಯವು ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿ ಪಾಕ್ ಉಗ್ರರನ್ನು ಸದೆ ಬಡಿದ ಹಿನ್ನೆಲೆಯಲ್ಲಿ ಚೆಟ್ಟಳ್ಳಿ ಸ್ಥಳೀಯರು ಪಟ್ಟಣದಲ್ಲಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ ಭಾರತೀಯ ಸೈನಿಕರಿಗೆ ಜಯಘೋಷ ಕೂಗಿದರು.

ಪೊನ್ನಂಪೇಟೆ: ಟೀಮ್ ಮೋದಿ ಸಂಘಟನೆ ವತಿಯಿಂದ ಪೊನ್ನಂಪೇಟೆಯಲ್ಲಿ ವಿಜಯೋತ್ಸ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಟೀಮ್ ಮೋದಿ ಸಂಘಟನೆಯ ಜಿಲ್ಲಾ ಸಂಚಾಲಕ ಕುಲದೀಪ್ ಪೂಣಚ್ಚ, ವೀರಾಜಪೇಟೆ ತಾಲೂಕು ಸಂಚಾಲಕ ಸಚಿನ್, ಅಭಿಷೇಕ್, ಗೋಣಿಕೊಪ್ಪ ನಗರ ಸಂಚಾಲಕ ಕುಮಾರ್, ಮುತ್ತುರಾಜ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು. ಇದಕ್ಕೂ ಮೊದಲು ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.