ಸುಂಟಿಕೊಪ, ಫೆ. 26: ಕೆದಕಲ್ ಗಾ.ಪಂ. ಆವರಣದಲ್ಲಿ 14ನೇ ಹಣಕಾಸು ಯೋಜನೆ ಹಾಗೂ ಪಂ. ಅನುದಾನದಲ್ಲಿ ರೂ. 2 ಲಕ್ಷ 15 ಸಾವಿರ ವೆಚ್ಚದ ಸಮುದಾಯ ಭವನದ ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಾಣಕ್ಕೆ ಪಂ. ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ ಭೂಮಿಪೂಜೆ ನೆÀರವೇರಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ವೀಣಾ, ಸದಸ್ಯರಾದ ದೇವಿಪ್ರಸಾದ್ ಕಾಯರ್‍ಮಾರ್, ವೆಂಕಪ್ಪ, ಹರಿಣಿ, ಕಾವೇರಿ, ಪಂಚಾಯಿತಿ ಸಿಬ್ಬಂದಿಗಳಾದ ರಾಮಚಂದ್ರ, ಬಾಲಚಂದ್ರ, ಗುತ್ತಿಗೆದಾರ ಇಬ್ರಾಹಿಂ ಹಾಜರಿದ್ದರು.