ನವದೆಹಲಿ, ಫೆ. 26: ಭಾರತೀಯ ವಾಯುಪಡೆಯ ವಿಮಾನಗಳು ಮಂಗಳವಾರ ಬೆಳಗಿನ ಜಾವ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 300ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸುವ ಮೂಲಕ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೀರಿಸಿಕೊಂಡಿವೆÉ.ಇಂದು ಬೆಳಗಿನ ಜಾವ 3.30ಕ್ಕೆ ಪಾಕಿಸ್ತಾನದ ಬಾಲಕೋಟ್‍ಗೆ ನುಗ್ಗಿದ ಭಾರತೀಯ ವಾಯುಪಡೆಯ 12 ಮಿರಾಜ್-2000 ಯುದ್ಧ ವಿಮಾನಗಳು, ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿವೆ.ಪುಲ್ವಾಮಾ ದಾಳಿ ನಡೆಸಿದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಬಾಲಕೋಟ್, ಚಕೋಟಿ, ಮುಜಾಫರಬಾದ್‍ನಲ್ಲಿದ್ದ ನೆಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ.
ಸುಮಾರು 1000 ಕೆಜಿ ಬಾಂಬ್ ಅನ್ನು ಉಗ್ರರ ನೆಲೆ ಮೇಲೆ ಹಾಕ ಲಾಗಿದೆ. ಒಟ್ಟು 12 ಮಿರಾಜ್‍ಯುದ್ಧ ವಿಮಾನಗಳು ಈ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದವು. 21 ನಿಮಿಷಗಳ ಕಾಲ ಈ ಕಾರ್ಯಾ ಚರಣೆಯನ್ನು ಯಶಸ್ವಿಯಾಗಿ ಪೂರೈಸಿ 12 ವಾಯುಪಡೆ ವಿಮಾನಗಳು ಸುರಕ್ಷಿತವಾಗಿ ವಾಪಸ್‍ಬಂದಿವೆ
ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿಗಳು ಖಚಿತ ಪಡಿಸಿದ್ದಾರೆ.ವೈಮಾನಿಕ ದಾಳಿ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಗುಪ್ತಚರ ಮಾಹಿತಿ ಆಧರಿಸಿದ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೈಶ್-ಇ-ಮೊಹಮ್ಮದ್ ನ ಅತಿ ದೊಡ್ಡ ತರಬೇತಿ ಕ್ಯಾಂಪ್‍ಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೆಇಎಂ ಭಯೋತ್ಪಾದಕರು, ತರಬೇತಿದಾರರು, ಹಿರಿಯ ಕಮಾಂಡರ್, ಜಿಹಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಂದು ದೇಶದ ಸೇನೆಗೆ ಸಂಬಂಧಿಸಿದ ಯಾವದೇ ನೆಲೆ, ಶಸ್ತ್ರಾಸ್ತ್ರ ಅಥವಾ ನಾಗರಿಕರಿಗೆ ಹಾನಿ ಮಾಡದೆ, ನಮ್ಮ ದೇಶಕ್ಕೆ ಅಪಾಯಕಾರಿ
(ಮೊದಲ ಪುಟದಿಂದ) ಆಗಿದ್ದವರನ್ನು ಕೊಲ್ಲಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಉಗ್ರಗಾಮಿಗಳಿಗೆ ಹೆಚ್ಚಿನ ತರಬೇತಿ ನೀಡುವ ಕ್ಯಾಂಪ್ ಆಗಿದ್ದ ಬಾಲಕೋಟ್‍ನಲ್ಲಿ ಇಸ್ರೇಲ್ ನಿರ್ಮಿತ ಸ್ಪೈಸ್/ಕ್ರಿಸ್ಟಲ್ ಮೇಜ್ ದೂರಗಾಮಿ ಬಾಂಬ್‍ಗಳನ್ನು ಬಳಸಿ, ಉಗ್ರ ನೆಲೆಯನ್ನು ನಾಮಾವಶೇಷ ಮಾಡಲಾಗಿದೆ.
ಧ್ವಂಸ ಮಾಡಿದ್ದು ಹೇಗೆ?
ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ಇದೊಂದು ರೋಚಕ ಘಟನೆಯೇ ಸರಿ., ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ ಮೇಲೆ ನಡೆದ ಬರ್ಬರ ಆತ್ಮಾಹುತಿ ದಾಳಿಯ ಪ್ರತೀಕಾರವನ್ನು ಸರಿಯಾಗಿ ಹನ್ನೆರಡು ದಿನಗಳ ನಂತರ ಭಾರತದ ವಾಯು ಸೇನೆ ತೀರಿಸಿಕೊಂಡು, ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. ಮಾರುತಿ ಎಕೋ ವಾಹನದಲ್ಲಿ ಸುಮಾರು ನೂರು ಕೆಜಿಯಷ್ಟು ಸ್ಫೋಟಕಗಳನ್ನು ತುಂಬಿಕೊಂಡಿದ್ದ ಆದಿಲ್ ಎಂಬ ಉಗ್ರ, ಕೇಂದ್ರ ಪೊಲೀಸ್ ಮೀಸಲು ಪಡೆಯಿದ್ದ ವಾಹನಕ್ಕೆ ಗುದ್ದಿ ಸ್ಫೋಟಗೊಳಿಸಿದ್ದ. ಈ ದುಷ್ಕೃತ್ಯದಲ್ಲಿ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಜವಾನರು ಹುತಾತ್ಮರಾಗಿದ್ದರು. ಈ ದಾಳಿಯ ನಂತರ ಭಾರತ ಏಕೆ ಭಾರೀ ಪ್ರಮಾಣದಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳೇ ಕೇಳಿಬರುತ್ತಲೇ ಇದ್ದವು. ವಿರೋಧಿ ಪಕ್ಷಗಳು ಕೂಡ ಭಾರತ ಸರಕಾರವನ್ನು ಕೆಣಕುತ್ತಲೇ ಇದ್ದವು. ಇದಕ್ಕೆ ಉತ್ತರವಾಗಿ ಇಂದು À ಬೆಳಗಿನ ಜಾವ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿರುವ ಭಾರತೀಯ ವಾಯು ಸೇನೆ ತಕ್ಕ ಉತ್ತರ ನೀಡಿದೆ. ಇಲ್ಲಿ ಒಂದು ಗಮನಿಸಬೇಕಾದ ಅತ್ಯಂತ ಪ್ರಮುಖ ಅಂಶವೆಂದರೆ, ಭಾರತದ ವಾಯು ಸೇನೆ ಪಾಕಿಸ್ತಾನದ ಯಾವದೇ ಸೈನಿಕರ ಮೇಲೆ ದಾಳಿ ನಡೆಸಿಲ್ಲ. ಬದಲಿಗೆ, ದಾಳಿ ನಡೆಸಿರುವುದು, ಪುಲ್ವಾಮಾ ಭಯೋತ್ಪಾದಕ ದಾಳಿಯ ಹೊಣೆಯನ್ನು ತಾನೇ ಹೊತ್ತುಕೊಂಡಿದ್ದ ಉಗ್ರ ಸಂಘಟನೆ ಜೈಷ್-ಇ-ಮೊಹಮ್ಮದ್ ಮೇಲೆ. ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್. ಆದರೆ, ಈ ಕರಾರುವಾಕ್ ದಾಳಿ ನಡೆದಿದ್ದು ಹೇಗೆ? ಇದ್ದಕ್ಕಿದ್ದಂತೆ ಈ ದಾಳಿ ನಡೆಸಲು ನಿರ್ಧರಿಸಲಾಯಿತೆ? ಅಥವಾ ಪೂರ್ವಯೋಜನೆಯಂತೆ ಎಲ್ಲವನ್ನೂ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಂಡು, ಮುಟ್ಟಿ ನೋಡುವ ಹಾಗೆ ದಾಳಿ ಮಾಡಲಾಯಿತೆ?
ಈ ದಾಳಿಗೂ ಕೆಲ ದಿನಗಳ ಮುಂಚೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮೂರೂ ಸೇನಾ ಮುಖ್ಯಸ್ಥರನ್ನು ಭೇಟಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ತರಬೇತಿ ನೆಲೆಗಳ ಮೇಲೆ ನಡೆಸಲಾಗುತ್ತಿರುವ ದಾಳಿಯ ವಿವರಗಳನ್ನು ನವದೆಹಲಿಯಲ್ಲಿ ನೀಡಿದ್ದಾರೆ. ಈ ದಾಳಿಯ ಹಿಂದಿರುವ ಅಪಾಯ ಮತ್ತು ದಾಳಿಗೆ ಬೇಕಾಗಿರುವ ಯುದ್ಧ ವಿಮಾನಗಳ ವಿವರಗಳನ್ನು ನೀಡಿದ್ದಾರೆ. ಈ ವಿವರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ನೀಡಲಾಗಿದೆ. ಎಲ್ಲಿ, ಹೇಗೆ, ಯಾವ ನೆಲೆಗಳ ಮೇಲೆ ದಾಳಿ ಬಲ್ಲ ಮೂಲಗಳ ಪ್ರಕಾರ, ಭಾರತೀಯ ವಾಯು ಸೇನೆಯ 12 ಮಿರಾಜ್ 2000 ಯುದ್ಧ ವಿಮಾನಗಳು ದಾಳಿಗೆ ಸಜ್ಜಾಗಿವೆ ಮತ್ತು ಅವನ್ನು ಮೂರು ತಂಡಗಳನ್ನಾಗಿ ವಿಭಾಗಿಸಲಾಗಿದೆ. ಗಡಿ ನಿಯಂತ್ರಣಾ ರೇಖೆಯ ಬಳಿಯಿರುವ ಬಾಲಕೋಟ್, ಮುಜಫರಾಬಾದ್ ಮತ್ತು ಚಾಕೋಟಿಯ ಮೇಲೆ ಯಾರು, ಯಾವ ರೀತಿ ಮತ್ತು ಎಷ್ಟು ಸಮಯಕ್ಕೆ ದಾಳಿ ಮಾಡಬೇಕೆಂದು ನಿರ್ಧಾರವಾಗಿದೆ. ಯೋಜನೆಯ ಪ್ರಕಾರ ಬೆಳಗಿನ ಜಾವ ಸುಮಾರು 3.45ಕ್ಕೆ ಬಾಲಕೋಟ್‍ನಲ್ಲಿ ಮೊದಲ ದಾಳಿಯಾಗಿದೆ. ನಂತರ 21 ನಿಮಿಷಗಳಲ್ಲಿ ಮುಜಫರಾಬಾದ್ ಮತ್ತು ಚಾಕೋಟಿಯ ಮೇಲೆ ದಾಳಿಗಳಾಗಿ, ತರಬೇತಿ ನೆಲೆಗಳು ಧ್ವಂಸವಾದ ನಂತರ ಯುದ್ಧ ವಿಮಾನಗಳು ವಾಪಸ್ ಬಂದಿವೆ. ಮಿರಾಜ್ 2000 ಯುದ್ಧ ವಿಮಾನಗಳಿಂದ ಬಾಲಕೋಟ್, ಮುಜಫರಾಬಾದ್, ಚಾಕೋಟಿ ಬಾಲಕೋಟ್, ಮುಜಫರಾಬಾದ್, ಚಾಕೋಟಿ ಮೊದಲ ದಾಳಿ ಮುಜಫರಾಬಾದ್ ನಿಂದ 24 ಕಿ.ಮೀ. ದೂರದಲ್ಲಿರುವ ಬಾಲಕೋಟ್ ಎಂಬಲ್ಲಿ ಜರುಗಿದೆ. 3.45ರಿಂದ 3.53ರೊಳಗೆ ಜೈಷ್ ಉಗ್ರ ಸಂಘಟನೆಯ ಕಂಟ್ರೋಲ್ ರೂಮ್, ತರಬೇತಿ ತಾಣಗಳನ್ನು ನಿರ್ನಾಮ ಮಾಡುವದರ ಜೊತೆಗೆ ಜೈಷ್ ಸಂಘಟನೆಯ ಮುಖ್ಯಸ್ಥರನ್ನು ಕೂಡ ನಾಶಗೊಳಿಸಲಾಗಿದೆ.
ಎರಡನೇ ದಾಳಿ ಮುಜಫರಾಬಾದ್‍ನಲ್ಲಿ 3.48ರಿಂದ 3.55ರೊಳಗೆ ನಡೆದಿದೆ. ಮೂರನೇ ದಾಳಿ ನಡೆದಿದ್ದು ಚಾಕೋಟಿಯಲ್ಲಿ. ಇದು ಬೆಳಿಗ್ಗೆ 4.06ರೊಳಗೆ ಸಂಪೂರ್ಣವಾಗಿದೆ. ಜೈಷ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದಿನ್, ಮತ್ತು ಲಷ್ಕರ್-ಇ-ತೈಬಾದ ನೆಲೆಗಳೂ ಇವುಗಳಲ್ಲಿ ಸೇರಿವೆ. ಈ ದಾಳಿಯಲ್ಲಿ ಸುಮಾರು 1000 ಕೆಜಿ ಲೇಸರ್ ಗೈಡೆಡ್ ಬಾಂಬ್‍ಗಳನ್ನು ಬಳಸಲಾಗಿದ್ದು, ಬಾಲಕೋಟ್, ಮುಜಫರಾಬಾದ್, ಚಾಕೋಟಿಯಲ್ಲಿನ ಎಲ್ಲ ಉಗ್ರರ ನೆಲೆಗಳು ನೆಲಸಮವಾಗಿವೆ. ಅಲ್ಫಾ-3 ಕಂಟ್ರೋಲ್ ರೂಂಗಳು ಸಂಪೂರ್ಣ ಧ್ವಂಸವಾಗಿವೆ. ಇದರಲ್ಲಿ ಉಗ್ರ ಸಂಘಟನೆಗೆ ಸೇರಿದ ಹಿರಿಯ ಕಮಾಂಡರ್ ಗಳು, ಜಿಹಾದಿಗಳು, ತರಬೇತಿದಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ, ಈ ಕ್ಯಾಂಪ್‍ಗಳ ನೇತೃತ್ವವನ್ನು ಜೈಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‍ನ ಬಾವಮೈದ ಮೌಲಾನಾ ಯುಸೂಫ್ ಅಜರ್ ಅಲಿಯಾಸ್ ಉಸ್ತಾದ್ ಘೌರಿ ಎಂಬಾತ ವಹಿಸಿಕೊಂಡಿದ್ದ. 1994 ರಲ್ಲಿ ಮಸೂದ್ ಅಜರ್ ನನ್ನು ಭಾರತ ಬಂಧಿಸಿದ್ದ ನಂತರ ಆತನನ್ನು ಬಿಡುಗಡೆ ಮಾಡಲು ಆಗ್ರಹಿಸಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ 1999 ರಲ್ಲಿ ಭಾರತದ ವಿಮಾನವನ್ನು ಹೈಜಾಕ್ ಮಾಡಿತ್ತು. ಈ ವಿಮಾನ ಹೈಜಾಕ್ ಯೋಜನೆಯ ಮಾಸ್ಟರ್ ಮೈಂಡ್ ಆಗಿದ್ದವನು ಮೌಲಾನ ಯೂಸೂಫ್ ಅಜರ್. ಅಂದು ವಿಮಾನ ಹೈಜಾಕ್ ಮಾಡಿ ಮಸೂದ್ ಅಜರ್‍ನನ್ನು ಬಿಡುಗಡೆ ಮಾಡಿಸಿದ್ದ ಮೌಲಾನ ಯೂಸೂಫ್ ಅಜರ್‍ನ್ನು ಭಾರತ ಇಂದು ಬೆಳಗಿನ ಜಾವ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಂಬ್ ಹಾಕಿ ಉಡಾಯಿಸಿದೆ. ಯೂಸೂಫ್ ಅಜರ್ ಜೊತೆಗೆ ಇನ್ನೂ ಅನೇಕ ಉಗ್ರರು ಸುಟ್ಟು ಭಸ್ಮವಾಗಿದ್ದಾರೆ.
ಪಾಕಿಸ್ತಾನದ ಉಗ್ರರ ಅಡಗುದಾಣಗಳನ್ನು ಭಸ್ಮ ಮಾಡಲು ಭಾರತದ ವಾಯುಪಡೆ ಆಯ್ಕೆ ಮಾಡಿಕೊಂಡಿದ್ದು ಮಿರಾಜ್-2000 ಫೈಟರ್ ಜೆಟ್, ಎಲ್ಲಾ ರೀತಿಯ ವಾತಾವರಣದಲ್ಲೂ ಪ್ರತಿಬಂಧಕ ಸಾಮಥ್ರ್ಯ ಹೊಂದಿರುವ ಮಿರಾಜ್-2000 ಫೈಟರ್ ಜೆಟ್, ಕಾರ್ಗಿಲ್ ಯುದ್ಧದ ವಿಜಯದಲ್ಲೂ ಮಹತ್ವದ ಪಾತ್ರ ವಹಿಸಿತ್ತು. ಮಿರಾಜ್-2000 ಟಾರ್ಗೆಟ್ ಅನ್ನು ಸ್ವಯಂ ಚಾಲಿತವಾಗಿ ಟ್ರಾಕ್ ಮಾಡುವ ಸಾಮಥ್ರ್ಯ ಹೊಂದಿದೆ.
ಸುಮಾರು 500 ಮೀಟರ್‍ಗಳ ರೇಡಿಯಸ್ ವ್ಯಾಪ್ತಿಯಲ್ಲಿ ನಿಖರವಾಗಿ ಲೇಸರ್ ಗೈಡೆಡ್ ಬಾಂಬಿಂಗ್ ಮಾಡಬಹುದಾಗಿದೆ. ಜೊತೆಗೆ ಟಾರ್ಗೆಟ್ ಗಳನ್ನು ಮ್ಯಾಪಿಂಗ್ ಮಾಡುವುದಕ್ಕೆ ಡೋಪ್ಲರ್ ಬೀಮ್-ಶಾರ್ಪನಿಂಗ್ ತಂತ್ರಜ್ಞಾನ ಹಾಗೂ ಹಾರಾಟದ ಸಮಯದಲ್ಲಿ ಪ್ರತಿ ಗಂಟೆಗೆ 900 ಕಿಮೀ ವೇಗದಲ್ಲಿ ಹಾರುವ ಸಾಮಥ್ರ್ಯ ಹೊಂದಿದ್ದು, ಎಂಬಿಡಿಎ ಅರ್ಮಾತ್ ರಾಡಾರ್ ಕ್ಷಿಪಣಿ ಪ್ರತಿಬಂಧಕ ಸಾಮಥ್ರ್ಯ ಹೊಂದಿರುವ ಕಾರಣಕ್ಕಾಗಿ ಮಿರಾಜ್-2000 ನ್ನು ವೈಮಾನಿಕ ದಾಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಟಾರ್ಗೆಟ್ ಗಳನ್ನು ನಿಖರವಾಗಿ ಫಿಕ್ಸ್ ಮಾಡಲು ಹಿರೋನ್ ಸರ್ವೇಕ್ಷಣಾ ವಿಮಾನವೂ ಸಹ ಸಾಥ್ ನೀಡಿದೆ
ಪ್ರತಿದಾಳಿ ಪಾಕಿಸ್ತಾನದ ಹಕ್ಕು
"ಭಾರತವು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಮಾಡಿದ ಆಕ್ರಮಣಕ್ಕೆ ಪ್ರತಿದಾಳಿ ನಡೆಸುವ ಹಕ್ಕು ಪಾಕಿಸ್ತಾನಕ್ಕಿದೆ. ನಾವು ಸೂಕ್ತ ಉತ್ತರ ನೀಡುತ್ತೇವೆ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿದ್ದಾರೆ. ಆದರೆ, ಭಾರತದಿಂದ ಯಾವದೇ ದಾಳಿಯೂ ಆಗಿಲ್ಲ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದಿದ್ದ ಭಾರತೀಯ ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯು ಸೇನೆಯಿಂದ ಹಿಮ್ಮೆಟ್ಟಿಸಲಾಗಿದೆ ಎಂದು ಪಾಕ್ ಸೇನಾ ವಕ್ತಾರ ತಿಳಿಸಿದ್ದಾರೆ. ಒಂದು ಕಡೆ ಭಾರತವು ದಾಳಿ ಮಾಡಿರುವುದನ್ನು ಪಾಕಿಸ್ತಾನ ಖಾತರಿ ಪಡಿಸುತ್ತಿದ್ದರೆ, ಮತ್ತೊಂದು ಕಡೆ ಪಾಕ್ ಸೇನೆ ನಿರಾಕರಿಸಿದೆ.
ವಿಶ್ವದÀ ವಿಶ್ವಾಸ
ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ, ದಟ್ಟ ಕಾಡಿನ ಮಧ್ಯೆ ನಡೆಯುತ್ತಿದ್ದ ಉಗ್ರಗಾಮಿಗಳ ತರಬೇತಿ ಶಿಬಿರಗಳ ಮೇಲೆ ವಾಯು ದಾಳಿ ನಡೆಸಲಾಗಿದೆ. ಈ ವೇಳೆ ಪಾಕಿಸ್ತಾನ ಸೇನೆಗೆ ಸಂಬಂಧಿಸಿದಂತೆ ಯಾವದೇ ಹಾನಿ ಆಗಿಲ್ಲ. ಅಷ್ಟೇ ಅಲ್ಲ, ಸಾಮಾನ್ಯ ನಾಗರಿಕರಿಗೂ ಏನೂ ತೊಂದರೆ ಆಗಿಲ್ಲ. ಇವೆರಡರ ಪೈಕಿ ಏನೇ ಆಗಿದ್ದರೂ ಪಾಕಿಸ್ತಾನದ ಸಾವಭೌಮತ್ವಕ್ಕೆ ಧಕ್ಕೆ ಮಾಡಿದಂತೆ ಆಗುತ್ತಿತ್ತು. ಇದರ ಜತೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಆ ನಿಯಮಗಳ ಪೈಕಿ ಯಾವದನ್ನು ಮೀರಿದರೂ ಅದು ಆ ದೇಶದ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಈಗ ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆಯ ನಾಯಕ ಯುಸೂಫ್ ಅಜರ್ ಮಸೂದ್ ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎಂಬದು ಭಾರತದ ಬೇಡಿಕೆ. ಅದಕ್ಕಾಗಿಯೇ ವಿಶ್ವಸಂಸ್ಥೆಯಲ್ಲಿ ಪ್ರಯತ್ನ ಕೂಡ ನಡೆಸುತ್ತಿದೆ. ಇಂಥ ಸನ್ನಿವೇಶದಲ್ಲಿ ತಾನೇ ವಿಶ್ವಸಂಸ್ಥೆಯ ನಿಯಮಗಳನ್ನು ಮೀರಿದರೆ ಅದು ಅಪಾಯಕಾರಿ . ಹೀಗಾಗಿ ಪಾಕಿಸ್ತಾನದ ಸಾರ್ವಭೌಮತೆಗೆ ಧಕ್ಕೆ ಬರುವಂಥದ್ದೇನೂ ಭಾರತ ಮಾಡಿಲ್ಲ ಎಂದು ಜಗತ್ತಿನ ಮುಂದೆ ಹೇಳಿದಂತೆಯೂ ಆಗಿದೆ. ಜೈಶ್-ಇ-ಮೊಹ್ಮದ್ ಸಂಘಟನೆಯ ಉಗ್ರರು ಭಾರತದ ಮೇಲೆ ಇನ್ನಷ್ಟು ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ದೇಶದ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಉಗ್ರಗಾಮಿಗಳನ್ನು ಕೊಲ್ಲಲಾಗಿದೆ. ಇದರಲ್ಲಿ ಪಾಕಿಸ್ತಾನದ ಸೈನಿಕರು ಹಾಗೂ ಸೈನ್ಯಕ್ಕೆ ಸಂಬಂಧಿಸಿದ ಯಾವದಕ್ಕೂ ಹಾಗೂ ಅಲ್ಲಿನ ನಾಗರಿಕರಿಗೂ ಹಾನಿ ಆಗಿಲ್ಲ ಎಂದು ಭಾರತ ಹೇಳಿ ಮುಗಿಸಿದೆ.
ಪ್ರತಿಧಾಳಿ ವಿಫಲ
ಪಾಕಿಸ್ತಾನ ನೆಲದಲ್ಲಿ ಭಾರತದ ಮಿರಾಜ್-2000 ಯುದ್ಧ ವಿಮಾನ ಭೀಕರ ಬಾಂಬ್ ದಾಳಿ ನಡೆಸುತ್ತಿದ್ದಾಗ ಪ್ರತಿದಾಳಿಗೆ ಮುಂದಾಗಿದ್ದ ಪಾಕಿಸ್ತಾನ ಎಫ್-16 ಜೆಟ್ ಯುದ್ಧ ವಿಮಾನ ಹೆದರಿ ವಾಪಸಾಗಿದೆ ಎಂದು ವರದಿಯಾಗಿದೆ. ಮಿರಾಜ್-2000 ಮಿಂಚಿನ ವೇಗದ ತೀವ್ರತೆಗೆ ಹೆದರಿ ತನ್ನ ಸೇನಾ ನೆಲೆಗೆ ವಾಪಸಾಗಿದೆ ಎಂದು ಹೇಳಲಾಗುತ್ತಿದೆ. 1971ರ ಇಂಡೋ-ಪಾಕ್ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಯುದ್ಧ ವಿಮಾನ ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ಕ್ಯಾಂಪ್‍ಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಹಿಂತಿರುಗಿವೆ.
ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಬರೋಬ್ಬರಿ ನಾಲ್ಕು ದಶಕಗಳ ನಂತರ ಭಾರತದ ಗಡಿಯಾಚೆ ರೆಕ್ಕೆ ಬಿಚ್ಚುವ ಅವಕಾಶ ಸಿಕ್ಕಿದೆ. ಇನ್ನು ಕಾರ್ಗಿಲ್‍ನಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭ ಆಗಿದ್ದ ಸಂದರ್ಭದಲ್ಲೂ ವಾಯುಪಡೆಗೆ ಗಡಿ ದಾಟುವ ಅವಕಾಶವನ್ನು ಭಾರತ ಸರ್ಕಾರ ನೀಡಿರಲಿಲ್ಲ. ಆದರೆ ಈಗ 40 ವರ್ಷಗಳ ಬಳಿಕ ಎಲ್‍ಒಸಿ ದಾಟಿದ ನಮ್ಮ ಯುದ್ಧ ವಿಮಾನಗಳು ಪಾಕ್ ಗಡಿಯಲ್ಲಿ ಅವಿತಿದ್ದ ಉಗ್ರರ ನೆಲೆಯನ್ನು ಧ್ವಂಸಗೊಳಿಸಿವೆÉ.