ಚುರು, ಫೆ.26: ದೇಶ ಸುರಕ್ಷಿತ ಕೈಗಳಲ್ಲಿವೆ, ದೇಶಕ್ಕಿಂತ ಮಿಗಿಲಾದದ್ದು ಯಾವದೂ ಇಲ್ಲ, ದೇಶ ಎಂದಿಗೂ ತಲೆತಗ್ಗಿಸುವಂತೆ ಮಾಡುವದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು, ತಾ.25 ರಂದು ರಾತ್ರಿ ಭಾರತೀಯ ವಾಯುಪಡೆ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ತರಬೇತಿ ಕ್ಯಾಂಪ್ಗಳ ಮೇಲೆ ಬಾಂಬ್ ದಾಳಿ ನಡೆಸಿ ಕನಿಷ್ಟ 300 ಉಗ್ರರನ್ನು ಭಸ್ಮ ಮಾಡಿತ್ತು. ಈ ಬೆನ್ನಲ್ಲೇ ತಾ.26 ರಂದು ರಾಜಸ್ಥಾನದ ಚುರುವಿನಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, 2014 ರಲ್ಲಿ ತಾವು ಚುರುವಿನಲ್ಲೇ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
ದೇಶಕ್ಕಿಂತ ಮಿಗಿಲು ಯಾವದೂ ಇಲ್ಲ, ದೇಶ ತಲೆತಗ್ಗಿಸಲು ಬಿಡುವದಿಲ್ಲ ಎಂದು 2014 ರಲ್ಲಿ ಇದೇ ಚುರುವಿನಲ್ಲಿ ನನ್ನ ಮನದಾಳದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ. 2014 ರ ದಿನವನ್ನು ಮತ್ತೆ ನೆನಪಿಸಿಕೊಳ್ಳುತ್ತ್ತಿದ್ದೇನೆ. ದೇಶ ಸುರಕ್ಷಿತವಾದ ಕೈಗಳಲ್ಲಿದೆ ಎಂಬ ಭರವಸೆ ನೀಡುತ್ತೇನೆ. ದೇಶ ತಲೆತಗ್ಗಿಸಲು ಬಿಡುವದಿಲ್ಲ ಎಂದು ಮೋದಿ ಹೇಳಿದ್ದಾರೆ. ದೇಶಕ್ಕಿಂತ ಮಿಗಿಲು ಯಾವದೂ ಇಲ್ಲ- ಪ್ರಧಾನಿಮೋದಿ
ಇದೇ ವೇಳೆ ಯೋಧರ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ಯೋಧರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕ ಅರ್ಪಣೆ ಮಾಡಿದ್ದೇವೆ, ನಮ್ಮ ಸರ್ಕಾರ ಬಂದ ನಂತರ 20 ಲಕ್ಷಕ್ಕಿಂತ ಹೆಚ್ಚು ಯೋಧರ ಕುಟುಂಬಗಳಿಗೆ ಒಆರ್ಒಪಿ ಲಾಭ ದೊರೆತಿದೆ ಎಂದು ಮೋದಿ ಹೇಳಿದ್ದಾರೆ.