ವೀರಾಜಪೇಟೆ, ಫೆ. 24: ಮೈಸೂರಿನಲ್ಲಿರುವ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಪುನಃಶ್ಚೇತನಕ್ಕೆ ಎಲ್ಲ ರೀತಿಯಿಂದಲೂ ಪೂರ್ಣ ಸಹಕಾರ ನೀಡುವದಾಗಿ ಸಂಘದ ಮಾಜಿ ಅಧ್ಯಕ್ಷ ಕರ್ನಂಡ ಎಂ. ರಘು ಸೋಮಯ್ಯ ತಿಳಿಸಿದ್ದಾರೆ.

ಆಡಳಿತಾಧಿಕಾರಿ ಸಂಘದ 5 ಎಕರೆ ಜಾಗವನ್ನು ಮಾರಾಟ ಮಾಡಲು ಯತ್ನಿಸಿದಾಗ ಹಿತರಕ್ಷಣಾ ಸಮಿತಿಯೊಂದಿಗೆ ತಾನು ಪ್ರತ್ಯೇಕ ತಡೆಯಾಜ್ಞೆ ತಂದು ಸಂಘಕ್ಕೆ ನಷ್ಟ ಉಂಟು ಮಾಡಿದ ಕೆಲವು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಗಿತ್ತು. ತಾ. 26 ರಂದು ಆಡಳಿತಾಧಿಕಾರಿ ಕರೆದಿರುವ ಸಂಘದ ಮಹಾಸಭೆಗೆ ಸದಸ್ಯರುಗಳೆಲ್ಲರೂ ಹಾಜರಾಗಿ ಸಂಘದ ಪುನಃಶ್ಚೇತನಕ್ಕಾಗಿ ಸಹಕರಿಸುವಂತೆ ಸೋಮಯ್ಯ ಆಗ್ರಹಿಸಿದ್ದಾರೆ.