ಮಡಿಕೇರಿ, ಫೆ. 24: ಕಳೆದ ರಾತ್ರಿ ನಾಪೋಕ್ಲು ಪಟ್ಟಣದಲ್ಲಿ ಯಾರೋ ಕಾರೊಂದನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದು, ಬಸ್ ಸಹಿತ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ದೃಶ್ಯ ಎದುರಾಯಿತು. ಪರಿಣಾಮ ದೂರದ ಬೆಂಗಳೂರಿಗೆ ತೆರಳಬೇಕಿದ್ದ ರಾಜ್ಯ ಸಾರಿಗೆ ಬಸ್ ಕೂಡ ನಿಲುಗಡೆಗೊಂಡು ಕಾರು ಚಾಲಕನಿಗೆ ಪ್ರಯಾಣಿಕರು ಹಿಡಿಶಾಪ ಹಾಕತೊಡಗಿದ್ದು, ಕೇಳಿ ಬಂತು. - ಎಸ್ಸೆಸ್