ಸೋಮವಾರಪೇಟೆ,ಫೆ.24: ಇತ್ತೀಚೆಗೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ಧಾಳಿಗೆ ಹುತಾತ್ಮರಾದ ಸೈನಿಕರ ಸ್ಮರಣೆ ಸಂದರ್ಭ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವ ಆರೋಪಿಯನ್ನು ತಕ್ಷಣ ಬಂಧಿ¸ Àಬೇಕೆಂದು ರಾಷ್ಟ್ರೀಯ ಸುರಕ್ಷಾ ಸಮಿತಿ ಹಾಗೂ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷಿ ್ಠಯಲ್ಲಿ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ, ಫೆ.14ರಂದು ಯೋಧರ ಮೇಲೆ ಭಯೋತ್ಪಾದಕರು ಆತ್ಮಾಹುತಿ ಧಾಳಿ ನಡೆಸಿ ಸೈನಿಕರ ಸಾವಿಗೆ ಕಾರಣರಾಗಿದ್ದರು. ಈ ಸಂಬಂಧ, 15ರಂದು ಸಂಜೆ ಇಲ್ಲಿನ ಪುಟ್ಟಪ್ಪ ವೃತ್ತದಲ್ಲಿ À ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಗಿತ್ತು. ಅಂದೇ ಸಂಜೆ 7-30ಕ್ಕೆ ರೇಂಜರ್ ಬ್ಲಾಕ್‍ನಲ್ಲಿ ವಾಸವಿರುವ ಶಂಷುದ್ದೀನ್ ಎಂಬ ಯುವಕ ಯೋಧರ ಸಾವನ್ನು ವೈಭವೀಕರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿರುವದು ದೇಶಕ್ಕೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಠಾಣೆಗೆ ಸಂಘ ಸಂಸ್ಥೆಗಳು ದೂರು ನೀಡಿದ್ದರೂ, ಇಲ್ಲಿಯವರೆಗೆ ಯಾವದೇ ಕ್ರಮಕ್ಕೆ ಇಲಾಖೆ ಮುಂದಾಗಿಲ್ಲ. ಆದ್ದರಿಂದ ಸಂಘದ ವತಿಯಿಂದ ಮಂಗಳವಾರ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸೋಮವಾರಪೇಟೆ ಪಟ್ಟಣ ಬಂದ್ ಮಾಡಲಾಗುವದು. ನಂತರದ ದಿನಗಳಲ್ಲಿ ಆರೋಪಿಯ ಬಂಧನವಾಗ ದಿದ್ದರೆ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕು ಬಂದ್ ನಡೆಸಲಾಗುವದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಎಂ.ಕೆ. ಸುಕುಮಾರ್, ಲೆಕ್ಕಪರಿಶೋಧಕರಾದ ಎಂ.ಕೆ. ಮಾಚಯ್ಯ ಹಾಗೂ ನಿರ್ದೇಶಕರಾದ ಎನ್.ಎ. ಮಹೇಶ್ ಉಪಸ್ಥಿತರಿದ್ದರು.