ಸೋಮವಾರಪೇಟೆ,ಫೆ.24: ವಿದ್ಯೆಯೊಂದಿಗೆ ಸಂಸ್ಕಾರ ರೂಢಿಸಿಕೊಳ್ಳುವವರು ಮಾತ್ರ ಸಮಾಜಕ್ಕೆ ಪೂರಕವಾಗಿ ಜೀವನ ಸಾಗಿಸುತ್ತಾರೆ. ಮಾನವೀಯ ಮೌಲ್ಯವಿರುವ ವ್ಯಕ್ತಿ ನಿಜವಾದ ವಿದ್ಯಾವಂತ ಎಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಕರೆ ನೀಡಿದರು.
ಗೌಡಳ್ಳಿ ಬಿ.ಜಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂಸ್ಕಾರವಿರುವ ವಿದ್ಯೆ ಕೊನೆ ತನಕ ಇರುತ್ತದೆ. ಪ್ರತಿಯೊಬ್ಬರು ಧಾರ್ಮಿಕ ಸೇವೆಯನ್ನು ಮಾಡಬೇಕು ಎಂದು ಹೇಳಿದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನ ಗಿರಿ ಶಿಕ್ಷಣ ಟ್ರಸ್ಟ್ನ ಆಡಳಿತಾಧಿಕಾರಿ ಶಿವರಾಮ್, ಗೌಡಳ್ಳಿ ಬಿ.ಜಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭರತ್ ಕುಮಾರ್, ಕಾರ್ಯದರ್ಶಿ ವಿ.ಎನ್. ನಾಗರಾಜ್, ತಾ.ಪಂ ಸದಸ್ಯೆ ಕುಸುಮಾ ಅಶ್ವಥ್, ಶಾಲೆಯ ಪ್ರಾಂಶುಪಾಲ ಲೋಕೇಶ್, ಅರಸೀಕೆರೆ ಬಿಜಿಎಸ್ ಕಾಲೇಜಿನ ಅನಂತ್ ಕುಮಾರ್, ಪ್ರಮುಖರಾದ ಎಚ್.ಆರ್. ಸುರೇಶ್, ಎಚ್.ಆರ್. ಮುತ್ತಣ್ಣ, ಬಿ.ಪಿ. ಮೊಗಪ್ಪ ಇದ್ದರು. ನಂತರ ವರ್ಣರಂಜಿತ ವೇದಿಕೆಯಲ್ಲಿ ನಡೆದ ಮಕ್ಕಳ ನೃತ್ಯ ಪ್ರೇಕ್ಷಕರನ್ನು ರಂಜಿಸಿತು.