ವೀರಾಜಪೇಟೆ, ಫೆ. 24: ಮೂರು ವರ್ಷಗಳ ಹಿಂದೆ ವೀರಾಜಪೇಟೆಯ ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಎಸ್. ಈಶ್ವರಿ ಅದೇ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್ ಗೋಪಾಲಕೃಷ್ಣ ವಿರುದ್ಧ ದೌರ್ಜನ್ಯ ಆರೋಪ ಮಾಡಿದ್ದರು. ಇದರನ್ವಯ ಸಿದ್ದಾಪುರ ಪೋಲೀಸರು ಗೋಪಾಲಕೃಷ್ಣ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
3 ವರ್ಷಗಳಿಂದ ವೀರಾಜಪೇಟೆ ಸತ್ರ ನ್ಯಾಯಾಲಯದಲ್ಲಿದ್ದ ಈ ಪ್ರಕರಣದಲ್ಲಿ ಯಾವದೇ ಸತ್ಯಾಂಶವಿಲ್ಲವೆಂದು ನ್ಯಾಯಾಧೀಶೆ ರಮಾ ತಾ.19.2.2019ರಂದು ತೀರ್ಪು ನೀಡಿದ್ದಾರೆ. ಗೋಪಾಲಕೃಷ್ಣ ಪರ ವಕೀಲ ವಿ.ಜಿ. ರಾಕೇಶ್ ವಾದ ಮಂಡಿಸಿದ್ದರು.