ಮಡಿಕೇರಿ, ಫೆ. 22: ಭಾಗಮಂಡಲ ನಾಡು ಅಯ್ಯಂಗೇರಿ ಗ್ರಾಮದ ಶ್ರೀ ಕೃಷ್ಣ ಚಿನ್ನತಪ್ಪ ದೇವಸ್ಥಾನದ ವಾರ್ಷಿಕ ಉತ್ಸವ ತಾ. 26 ರಿಂದ 28 ರವರೆಗೆ ನಡೆಯಲಿದೆ.

ತಾ. 26 ರಂದು 6.30 ಗಂಟೆಯಿಂದ ಬೆಳಗಿನ ಹಬ್ಬ, ತಾ. 27 ರಂದು ಪಟ್ಟಣಿ ಹಬ್ಬ (ದೊಡ್ಡ ಹಬ್ಬ), ತಾ. 28 ರಂದು ಭಂಡಾರ ಇಡುವದು ಮತ್ತು ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.