ಚೆಟ್ಟಳ್ಳಿ, ಫೆ. 23: ತಿತಿಮತಿಯ ಖುವ್ವತುಲ್ ಇಸ್ಲಾಂ ರಿಲೀಫ್ ಸಮಿತಿಯ ವತಿಯಿಂದ ಶೈಖುನಾ ಅತ್ತಿಪಟ್ಟ ಮೊಯಿದೀನ್ ಕುಟ್ಟಿ ಮುಸ್ಲಿಯಾರ್ ಅನುಸ್ಮರಣೆ ಹಾಗೂ ಧಾರ್ಮಿಕ ಪ್ರವಚನ ಮತ್ತು ಬಡ ಹೆಣ್ಣು ಮಗಳ ವಿವಾಹ ಕಾರ್ಯಕ್ರಮ ತಿತಿಮತಿಯ ಶಂಸುಲ್ ಉಲಮಾ ನಗರದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ಎಂ.ಎಸ್ ಅಬ್ದುಲ್ ಜಲೀಲ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಯ್ಯಿದ್ ಮುಹಮ್ಮದ್ ಕೋಯ ತಙÐಳ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಅಲ್ ಹಾಫಿಳ್ ಸಿರಾಜುದ್ದೀನ್ ಅಲ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಿದರು. ಕೊಡಗು ಜಿಲ್ಲಾ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಧಾರ್ಮಿಕ ಮುಖಂಡರು ಇನ್ನಿತರರು ಇದ್ದರು.