ಯುಪಿಯಲ್ಲಿ ಇಬ್ಬರು ಉಗ್ರರ ಸೆರೆ

ಲಖನೌ, ಫೆ. 22: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾದ ಇಬ್ಬರು ಉಗ್ರಗಾಮಿಗಳನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶ ಪೆÇಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಉತ್ತರ ಪ್ರದೇಶದ ಖಂಕಾಹ್ ಪೆÇಲೀಸ್ ಠಾಣೆಯ ಸಮೀಪದಲ್ಲಿರುವ ಖಾಸಗಿ ಹಾಸ್ಟೆಲ್ ನಲ್ಲಿ ತಂಗಿದ್ದ ಶಹನವಾಜ್ ಅಹ್ಮತ್ ತೆಲಿ ಹಾಗೂ ಅಕಿಬ್ ಎಂಬುವವರನ್ನು ಬಂಧಿಸಲಾಗಿದೆ. ಇಬ್ಬರೂ ಉಗ್ರರು ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಸಂಘಟನೆಯಲ್ಲಿ ಗ್ರೆನೇಡ್ ಎಕ್ಸ್‍ಪರ್ಟ್‍ಗಳಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಪೆÇಲೀಸ್ ವರಿಷ್ಠಾಧಿಕಾರಿಗಳು, ಇಬ್ಬರೂ ಕಾಶ್ನೀರ ಮೂಲದವರಾಗಿದ್ದು, ಶಹನವಾಜ್ ಕುಲ್ಗಾಮ್ ನಿವಾಸಿಯಾಗಿದ್ದು, ಅಕಿಬ್ ಪುಲ್ವಾಮ ನಿವಾಸಿಯಾಗಿದ್ದಾನೆ. ಇಬ್ಬರ ಬಂಧನದ ವೇಳೆ ಎರಡು ಬಂದೂಕು ಮತ್ತು ಜೀವಂತ ಗುಂಡುಗಳಿರುವ 2 ಕಾಟ್ರ್ರಿಡ್ಜ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರ ಸಂಘಟನೆಗಾಗಿ ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ಈ ಇಬ್ಬರೂ ಉತ್ತರ ಪ್ರದೇಶಕ್ಕೆ ಬಂದಿದ್ದರು ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.

ಆಜಾóದ್ ಕಾಶ್ಮೀರ ವಿದ್ಯಾರ್ಥಿಗಳ ಬಂಧನ

ಕೇರಳ, ಫೆ. 22: ಸ್ವತಂತ್ರ ಕಾಶ್ಮೀರ/ಆಜಾದ್ ಕಾಶ್ಮೀರ ಬೆಂಬಲಿಸಿ ಪೆÇೀಸ್ಟರ್ ಹಂಚುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಬಂಧಿತರನ್ನು ಮೊಹಮ್ಮದ್ ರಿನ್ಶಾದ್ (20) ಹಾಗೂ ಮೊಹಮ್ಮದ್ ಫರೀಸ್ (18) ಏಂದು ಗುರುತಿಸಲಾಗಿದ್ದು ಇವರು ಮಲಪ್ಪುರಂನ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳೆನ್ನಲಾಗಿದೆ. ರಿನ್ಶಾದ್ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರೆ ಫರಿಸ್ ಮೊದಲ ವರ್ಷದಲ್ಲಿ ಕಲಿಯುತ್ತಿದ್ದನು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 (ದೇಶದ್ರೋಹ) ಅಡಿಯಲ್ಲಿ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ಪುಲ್ವಾಮಾ ಘಟನೆಯ ನಂತರ ವಿದ್ಯಾರ್ಥಿಗಳು ಕಾಶ್ಮೀರಕ್ಕೆ ಸ್ವಾತಂತ್ರ್ಯ, ಮಣಿಪುರಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಸೂಚಿಸುವ ಭಿತ್ತಿಪತ್ರಗಳನ್ನು ಕಾಲೇಜು ಕ್ಯಾಂಪಸ್‍ನಲ್ಲಿ ಅಂಟಿಸುವದು, ಹಂಚುವದು ಮಾಡುತ್ತಿದ್ದರು ಎಂದು ಪೆÇಲೀಸರು ಹೇಳಿದ್ದಾರೆ.

ಸೇನೆಗೆ ಆಧುನಿಕ ಹೆಲಿಕಾಪ್ಟರ್ ಹಸ್ತಾಂತರ

ಬೆಂಗಳೂರು, ಫೆ. 22: ಭಾರತೀಯ ರಕ್ಷಣಾ ವಲಯದ ಪ್ರಮುಖ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಹೆಚ್‍ಎಎಲ್), ಭಾರತೀಯ ಸೇನೆಗೆ ಮೂರು ಅತ್ಯಾಧುನಿಕ ಎಎಲ್‍ಹೆಚ್-ಎಂಕೆ 3 ಹೆಲಿಕಾಪರ್ಟ್‍ಗಳನ್ನು ಹಸ್ತಾಂತರಿಸಿದೆ. ಏರೋ-ಇಂಡಿಯಾ-2019 ಪ್ರದರ್ಶನದ ವೇಳೆ ಹೆಲಿಕಾಪ್ಟರ್‍ಗಳನ್ನು ಸೇನೆಗೆ ಔಪಚಾರಿಕವಾಗಿ ಹಸ್ತಾಂತರಿಸಲಾಯಿತು. 41 ಎಎಲ್‍ಹೆಚ್-ಎಂಕೆ -3 ಹೆಲಿಕಾಪ್ಟರ್‍ಗಳ ಪೂರೈಕೆ ಗುತ್ತಿಗೆ ಪಡೆದಿದ್ದ ಹೆಚ್‍ಎಎಲ್, ಗಡುವಿನ ಆರು ತಿಂಗಳ ಮೊದಲೇ ಮೂರು ಹೆಲಿಕಾಪ್ಟರ್‍ಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಸಮಾರಂಭದಲ್ಲಿ ಹೆಚ್.ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಅವರು ಔಪಚಾರಿಕವಾಗಿ ಹೆಲಿಕಾಪ್ಪರ್ ದಾಖಲೆಗಳನ್ನು ಲೆಫ್ಟಿನೆಂಟ್ ಜನರಲ್ ಕನ್ವಾಲ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ನಾಲ್ವರು ಜಿಲ್ಲಾಧಿಕಾರಿಗಳ ವರ್ಗಾವಣೆ

ಹಾಸನ, ಫೆ. 22: ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಕೊನೆಗೂ ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಎ. ಮಂಜು ಒತ್ತಾಯದ ಮೇರೆಗೆ ಅವರನ್ನು ಅವಧಿಗೆ ಮುನ್ನ ಹಾಸನದಿಂದ ರೋಹಿಣಿ ಅವರನ್ನು ವರ್ಗಾವಣೆ ಮಾಡಿಸಲಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಿಂಧೂರಿ ಕೆಎಟಿ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ವೇಳೆ ರೇವಣ್ಣ ಸಿಂಧೂರಿ ಪರವಾಗಿ ನಿಂತಿದ್ದರು. ವರ್ಗಾವಣೆ ವಿರುದ್ಧ ತಡೆ ಆದೇಶ ನೀಡಲಾಗಿತ್ತು. ಮೈತ್ರಿ ಸರ್ಕಾರ ರಚನೆ ಬಳಿಕ ತಾವು ಈ ಹಿಂದೆ ಬೆಂಬಲಿಸಿದ್ದ ಜಿಲ್ಲಾಧಿಕಾರಿಯೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಇವರ ನಡುವಿನ ವಾಗ್ವಾದ ಕೂಡ ಬಹಿರಂಗಗೊಂಡಿತ್ತು.

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್

ನವದೆಹಲಿ, ಫೆ. 22: ಪುಲ್ವಾಮಾ ಉಗ್ರ ಧಾಳಿ ಬಳಿಕ ಪಾಕಿಸ್ತಾನದ ಪರಿಸ್ಥಿತಿ ಹದಗೆಡುತ್ತಿದ್ದು, ಈ ಮಧ್ಯೆ ಮತ್ತೊಂದು ಶಾಕ್ ಎದುರಾಗಿದೆ. ಎಫ್‍ಎಟಿಎಫ್ ಗ್ರೇ ಲಿಸ್ಟ್‍ನಿಂದ ಪಾಕಿಸ್ತಾನಕ್ಕೆ ಮುಕ್ತಿ ಸಿಗದಂತಾಗಿದೆ. ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆ (ಎಫ್‍ಎಟಿಎಫ್) ಅಕ್ಟೋಬರ್‍ವರೆಗೂ ಪಾಕಿಸ್ತಾನವನ್ನು ಬೂದು ಪಟ್ಟಿ (ಗ್ರೇ ಲಿಸ್ಟ್)ಯಲ್ಲಿಡಲು ನಿರ್ಧರಿಸಿದೆ. ಪುಲ್ವಾಮಾ ಧಾಳಿ ಹಿನ್ನೆಲೆ ಪಾಕಿಸ್ತಾನವನ್ನು ಯಾವದೇ ಕಾರಣಕ್ಕೂ ಪಟ್ಟಿಯಲ್ಲಿ ಹೊರಗಿಡಬಾರದು ಎಂದು ಭಾರತ ಬಲವಾಗಿ ಪ್ರತಿಪಾದಿಸಿದ ಬಳಿಕ ಎಫ್‍ಎಟಿಎಫ್ ಈ ತೀರ್ಮಾನ ಕೈಗೊಂಡಿದೆ. ಈ ತೀರ್ಮಾನದಿಂದ ಭಯೋತ್ಪಾದಕರಿಗೆ ಬೆಂಬಲ ಹಾಗೂ ಹಣಕಾಸು ನೆರವು ನೀಡುತ್ತಿರುವ ಪಾಕ್ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದೆ. 2019ರ ಅಕ್ಟೋಬರ್‍ವರೆಗೂ ಪಾಕಿಸ್ತಾನವನ್ನು ಗ್ರೇ ಲಿಸ್ಟ್‍ನಲ್ಲಿ ಇರಿಸಲಾಗುತ್ತಿದ್ದು ಎಫ್‍ಎಟಿಎಫ್ ಸದಸ್ಯರ 27 ಬೇಡಿಕೆಗಳಿಗೆ ಬದ್ಧತೆ ತೋರಲು ಕಾಲಾವಕಾಶ ನೀಡಲಾಗಿದೆ. ಈ ಬಳಿಕವೂ ಪಾಕ್ ಇದನ್ನು ಮುಂದುವರೆಸಿದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ

ಮೈಸೂರು, ಫೆ. 22: ರೈಲು ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಈ ಒಂದು ದೂರವಾಣಿ ಕರೆ ರೈಲು ಪ್ರಯಾಣಿಕರ ಆತಂಕ, ರೈಲ್ವೆ ಪೆÇಲೀಸರು ಹಾಗೂ ಅಧಿಕಾರಿಗಳ ಬಿರುಸಿನ ತಪಾಸಣೆಗೆ ಕಾರಣವಾಗಿತ್ತು. ಆದರೆ ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಾಗ ಎಲ್ಲರೂ ನಿಟ್ಟುಸಿರಿಟ್ಟಿದ್ದಾರೆ. ಶುಕ್ರವಾರ ಮುಂಜಾನೆ ರೈಲ್ವೆ ಅಧಿಕಾರಿಗಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ರೈಲು ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವದಾಗಿ ತಿಳಿಸಿದ್ದ. ಆದರೆ ಯಾವ ನಿಲ್ದಾಣ ಎಂದು ಸೂಚಿಸಿರಲಿಲ್ಲ. ಹೀಗಾಗಿ ಮೈಸೂರು ನಗರ ರೈಲ್ವೆ ಸೇರಿದಂತೆ ಎಲ್ಲ ನಿಲ್ದಾಣಗಳಲ್ಲೂ ತಪಾಸಣೆ ಆರಂಭಿಸಲಾಯಿತು. ಬಾಂಬ್ ನಿಷ್ಕ್ರಿಯ ದಳ ಹಾಗೂ ಪೆÇಲೀಸರು ಪ್ರಯಾಣಿಕರಿದ್ದ ರೈಲುಗಳನ್ನು ನಿಲ್ಲಿಸಿ ತಪಾಸಣೆಗೆ ಮುಂದಾದರು. ಎಲ್ಲಿಯೂ ಬಾಂಬ್ ಪತ್ತೆಯಾಗದ ಕಾರಣ ಹುಸಿ ಬಾಂಬ್ ಕರೆ ಪ್ರಕರಣ ದಾಖಲಿಸಿಕೊಳ್ಳಲಾಯಿತು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಚಾಮರಾಜನಗರ, ಬಾಗಲಕೋಟೆ ನಿಲ್ದಾಣಗಳಲ್ಲಿ ಸಹ ಬಾಂಬ್ ಇದೆ ಎನ್ನುವ ಹುಸಿ ಕರೆಗಳು ಬಂದಿದ್ದು ಅಲ್ಲಿ ಸಹ ತಪಾಸಣೆ ನಡೆದ ವರದಿಯಾಗಿದೆ.

ಬಜ್ಪೆ ವಿಮಾನ ನಿಲ್ದಾಣ ವಿಸ್ತರಣೆ

ಮಂಗಳೂರು, ಫೆ. 22: ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರಾಜ್ಯಪಾಲ ವಜೂಭಾಯಿ ವಾಲಾ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಪ್ರಸ್ತುತ ಟರ್ಮಿನಲ್ ವಿಸ್ತಾರ 19,509 ಚದರ ಮೀಟರ್ ಇದೆ. ಹೊಸದಾಗಿ 11,343 ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಈಗ ದಟ್ಟಣೆಯ ಅವಧಿಯಲ್ಲಿ ಪ್ರತಿ ಗಂಟೆಗೆ 730 ಪ್ರಯಾಣಿಕರಿಗೆ ಬೋರ್ಡಿಂಗ್ ಅವಕಾಶ ಕಲ್ಪಿಸುವ ಸಾಮಥ್ರ್ಯ ಇದೆ. ಹೊಸ ಟರ್ಮಿನಲ್ ನಿರ್ಮಾಣದ ಬಳಿಕ ಪ್ರತಿ ಗಂಟೆಗೆ 1 ಸಾವಿರ ಪ್ರಯಾಣಿಕರಿಗೆ ಬೋರ್ಡಿಂಗ್‍ಗೆ ಅವಕಾಶ ಕಲ್ಪಿಸುವ ಸಾಮಥ್ರ್ಯ ದೊರಕಲಿದೆ. ವಾರ್ಷಿಕ ಪ್ರಯಾಣಿಕರ ಸಂಖ್ಯೆ 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಲಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ವಿಭಾಗದಲ್ಲಿ ಎರಡು ಹೊಸ ಬ್ಯಾಗೇಜ್ ಕನ್ವೆಯರ್ ಮತ್ತು ದೇಶಿಯ ಪ್ರಯಾಣಿಕರ ವಿಭಾಗದಲ್ಲಿ ಒಂದು ಹೊಸ ಕನ್ವೆಯರ್ ಅಳವಡಿಸಲಾಗುತ್ತದೆ. ಎರಡು ಹೊಸ ಪ್ರಯಾಣಿಕರ ಬೋರ್ಡಿಂಗ್ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. ಪ್ರಯಾಣಿಕರ ವಿಶ್ರಾಂತಿಗೆ ಬೃಹತ್ ಕೊಠಡಿ, ಉಪಹಾರ ಗೃಹ, ಪ್ರಯಾಣಿಕರ ಭೇಟಿಗೆ ಸ್ಥಳಾವಕಾಶ, ಪ್ರಥಮ ಚಿಕಿತ್ಸಾ ಕೊಠಡಿಗಳನ್ನು ಈ ಯೋಜನೆಯಲ್ಲಿ ನಿರ್ಮಿಸಲಾಗುತ್ತದೆ. ದೇಶದ ಎಂಟು ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ದೆಹಲಿಯಲ್ಲಿ ಚಾಲನೆ ನೀಡಿದರು.