ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿಯ ಬಸವನಹಳಿ ್ಳಯಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ 525 ಕುಟುಂಬಗಳಿಗೆ ಮನೆ ನಿರ್ಮಾಣ ಕಾಮಗಾರಿಯು ಶೇ.85 ರಷ್ಟು ಮುಗಿದಿದ್ದು, 300 ಮನೆಗಳು ಫಲಾನುಭವಿಗಳಿಗೆ ಹಸ್ತಾಂತರಕ್ಕೆ ಸಿದ್ಧಗೊಂಡಿವೆ. ಜಿಲ್ಲೆಗೆ ಮುಖ್ಯಮಂತ್ರಿಗಳು ತಾ. 28 ರಂದು ಭೇಟಿ ಮಾಡುವ ಸೂಚನೆಯಿದ್ದು, ಅಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಿದ್ಧಗೊಂಡಿರುವ 300 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವದು ಎಂದು ತಿಳಿದುಬಂದಿದೆ.
528 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ಕಳೆದ ಮೂರು ತಿಂಗಳ ಹಿಂದೆ ಸರಕಾರದಿಂದ ಹಣ ಮಂಜೂ ರಾಗದೆ ಅಡಿಪಾಯ ಕಾಮಗಾರಿ ಯನ್ನು ಪೂರ್ಣಗೊಳಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿ, ಕಳೆದ ತಿಂಗಳಿನಿಂದ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಗೋಡೆ ಕಟ್ಟುವ ಕಾಮಗಾರಿಯ ಮೂಲಕ ಪ್ರಾರಂಭಗೊಂಡು ಮನೆಗಳಿಗೆ ಕಿಟಕಿ, ಬಾಗಿಲು, ಮೇಲ್ಚಾವಣಿ, ವಿದ್ಯುತ್, ನೆಲಕ್ಕೆ ಟೈಲ್ಸ್ ಹಾಕುವ ಮೂಲಕ 300 ಮನೆಗಳ ಕಾಮಗಾರಿ ಸಂಪೂರ್ಣಗೊಂಡಿದೆ. ನಿರ್ಮಿತಿ ಕೇಂದ್ರದವರು ಈಗಾಗಲೇ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಬೇಕಾಗುವ ಸಿದ್ಧತೆ ಮಾಡುತ್ತಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರವು ನಿರ್ಮಿತಿ ಕೇಂದ್ರದ ಮೂಲಕ ಅಂದಾಜು ವೆಚ್ಚ ರೂ. 20 ಕೋಟಿ ಹಣದಲ್ಲಿ ರೂ. 14 ಕೋಟಿ ಮಾತ್ರ ಬಿಡುಗಡೆಯಾಗಿರುವದು ತಿಳಿದುಬಂದಿದೆ. ಇನ್ನೂ ಸರ್ಕಾರ ದಿಂದ ಸಂಬಂಧಪಟ್ಟ ಇಲಾಖೆಗೆ ರೂ.6 ಕೋಟಿ ಬಿಡುಗಡೆ ಯಾಗಬೇಕಿದೆ. ಹಣ ಬಿಡುಗಡೆ ಯಾಗುವದನ್ನು ಕಾಯದೆ ನಿರ್ಮಿತಿ ಕೇಂದ್ರದ ವತಿಯಿಂದ ಗುತ್ತಿಗೆz Áರರ ಮೂಲಕ ಕಾಮಗಾರಿಯನ್ನು ನಡೆಸುತ್ತಿದ್ದರು. ಇದೀಗ ಹಂತ ಹಂತವಾಗಿ ಹಣ ಬಿಡುಗಡೆ ಯಾಗುತ್ತಿದೆ. ಇನ್ನುಳಿದ 228 ಮನೆಗಳ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯವರು ತಾತ್ಕಾಲಿಕ ಶೆಡ್‍ನಲ್ಲಿರುವ ಕುಟುಂಬ ದವರನ್ನು ಹಾಗೂ ಶಾಶ್ವತ ಮನೆ ನಿರ್ಮಾಣ ಮಾಡಲು ಗುರುತಿಸಿ ರುವ ಜಾಗದಲ್ಲಿರು ವವರನ್ನು ಪಕ್ಕದ ಸ್ಥಳಕ್ಕೆ ಸ್ಥಳಾಂತರ ಮಾಡಿದ ತಕ್ಷಣ ಇನ್ನುಳಿದ ಮನೆಗಳ ಕಾಮಗಾರಿ ಯನ್ನು ನಡೆಸಲಾಗುª Àದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.-ಕೆ.ಕೆ.ನಾಗರಾಜಶೆಟ್ಟಿ.