ಮಡಿಕೇರಿ, ಫೆ. 23: ತಾ. 15.5.2014 ರಂದು ಚೇರಂಬಾಣೆ ಬಳಿ ಬಿ. ಬಾಡಗ ಗ್ರಾಮದ ಕೆ.ಬಿ. ಬಿಪಿನ್ ಎಂಬಾತ, ಭಾಗಮಂಡಲ ಪೊಲೀಸರಿಗೆ ನಿಂದಿಸಿ ಬೆದರಿಕೆವೊಡ್ಡಿದ್ದ ಪ್ರಕರಣ ಸಂಬಂಧ ಇಲ್ಲಿನ ಸಿ.ಜೆ.ಎಂ. ನ್ಯಾಯಾಲಯ ಆರೋಪಿಗೆ ಒಟ್ಟು ರೂ. 9 ಸಾವಿರ ದಂಡ ಹಾಗೂ 9 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದೆ. ವಿಚಾರಣೆ ಆಲಿಸಿದ ನ್ಯಾಯಾಧೀಶ ವಿಜಯಕುಮಾರ್ ಆಪಾದನೆ ಖಾತರಿಗೊಂಡ ಮೇರೆಗೆ ಶಿಕ್ಷೆ ವಿಧಿಸಿದ್ದು, ಸರಕಾರಿ ಅಭಿಯೋಜಕಿ ಅಶ್ವಿನಿ ವಕಾಲತ್ತು ಮಂಡಿಸಿದ್ದರು.