ಒಡೆಯನಪುರ, ಫೆ. 21: ಹೆಗ್ಗಡಹಳ್ಳಿ ಗ್ರಾಮದ ಶ್ರೀಮಠದಲ್ಲಿ ಶ್ರೀ ಷಡ್ವಾರ ಹೀತೇಧ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕಣಿಯಪ್ಪ (ಗುರು) ದೀಕ್ಷಾ ಸಂಸ್ಕಾರ ಕಾರ್ಯ ಕ್ರಮವನ್ನು ನಡೆಸಲಾಯಿತು.
ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಕೊಣೆಗನಹಳ್ಳಿ ಗ್ರಾಮದ ಕೆ.ಜೆ. ಧರ್ಮಪ್ಪ-ಬಿಂದಮ್ಮ ದಂಪತಿ ಪುತ್ರ ಕೆ.ಡಿ. ವೀರಭದ್ರಪ್ಪ, ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ ವಿನೂತನ್ ಇವರುಗಳು ಸ್ವಾಮೀಜಿಗಳಿಂದ ದೀಕ್ಷೆ ಪಡೆದುಕೊಂಡರು.
ಹೆಗ್ಗಡಹಳ್ಳಿ ಶ್ರೀ ಹೇರೇಮಠದ ಆಡಳಿತ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ವಿಶೇಷವಾಗಿ ತೀರಾ ಹಿಂದುಳಿದ ಪರಿಶಿಷ್ಟ ವರ್ಗದವರಿಗೆ ದೀಕ್ಷೆ ಸಂಸ್ಕಾರ ನೀಡಿ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಕಣಿಯಪ್ಪ (ಗುರು)ಗಳು ಅರ್ಹತೆಯನ್ನು ಹೊಂದಿರುತ್ತಾರೆ, ಶ್ರೀ ಹೆಗ್ಗಡಹಳ್ಳಿ ಶ್ರೀಮಠವೂ ವೀರಶೈವ ಪರಂಪರೆ ಇತಿಹಾಸ ಹಿನ್ನೆಲೆ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಶ್ರೀಮಠವು ಸಮಾಜದ ಉದ್ದಾರಕ್ಕಾಗಿ ಶ್ರಮಿಸುವದೊಂದಿಗೆ ಶೋಷಿತ ಸಮುದಾಯವನ್ನು ಸಮಾಜದಲ್ಲಿ ಮೇಲ್ಪಂಕ್ತಿಗೆ ತರಲು ಪ್ರಯತ್ನಿಸುತ್ತದೆ ಎಂದರು.
ಈ ಸಂದರ್ಭ ಶ್ರೀ ಷಾಡ್ಪುರ ಹೀತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧಾರ್ಮಿಕ ಕಾಯಕ ಪವಿತ್ರ ವಾದದ್ದು, ಅದರಲ್ಲೀ ಶಿವರಾಧನೆ ಮನುಷ್ಯನ ಮಾನಸಿಕ ಸ್ಥಿತಿಯನ್ನು ನಿಯಂತ್ರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯಸಳೂರು ತೆಂಕಲಗೂಡು ಬ್ರಹ್ಮಮಠದ ಚನ್ನಮಲ್ಲಿಕಾಜುನ ಶಿವಚಾರ್ಯ ಸ್ವಾಮೀಜಿ ಮಾತನಾಡಿದರು.
ಈ ಸಂದರ್ಭ ಎ.ಕೆ. ರಾಜಶೇಖರ್, ಬಸವರಾಜು ಪಾಟೀಲ್ ಹೆಗ್ಗಡಹಳ್ಳಿ, ಶಾಂತ ಬಸವರಾಜು ಪಾಟೀಲ್, ಪ್ರಭಾಕರ್ ಕೊಟ್ಟೂರ್, ಹಫಿ ವಿ.ವಿ. ನಿಲಯದ ಸಹಾಯಕ ಕುಲ ಸಚಿವ ಎಂ.ಎಂ. ಶಿವಪ್ರಕಾಶ್, ಜಾನಪದ ಪರಿಷತ್ ಸಂಚಾಲಕ ವಿ.ಸಿ. ಸುರೇಶ್ ಒಡೆಯನಪುರ ಮುಂತಾದವರಿದ್ದರು.