*ಗೋಣಿಕೊಪ್ಪಲು, ಫೆ. 21: ಮೀನುಗಾರಿಕೆ ಇಲಾಖೆ ವತಿಯಿಂದ ರೂ. 70 ಸಾವಿರ ಮೌಲ್ಯದ ತೆಪ್ಪ, ಹರಿಗೋಲು ಹಾಗೂ ಬಲೆಗಳನ್ನು ಫಲಾನುಬಾವಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

ರಾಜ್ಯಮಟ್ಟದ ಯೋಜನೆಯಡಿ ವೀರಾಜಪೇಟೆ ತಾಲೂಕಿನ 7 ಫಲಾನುಭವಿಗಳಿಗೆ ತಲಾ 10 ಸಾವಿರ ರೂ.ಗಳಲ್ಲಿ ಬಲೆ, ತೆಪ್ಪ, ಹರಿಗೋಲನ್ನು ನೀಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಬಹಳಷ್ಟು ಕೆರೆಗಳಿದ್ದರೂ ಕೃಷಿಕರು ಮೀನು ಸಾಕಣೆ ಬಗೆ ಆಸಕ್ತಿ ಹೊಂದಿಲ್ಲ. ಮೀನು ಸಾಕಾಣೆಕೆಯಿಂದ ಆರ್ಥಿಕ ಬಲ ಹೆಚ್ಚಲಿದೆ. ಇಲಾಖೆಯ ಯೋಜನೆಗಳನ್ನು ಪಡೆದುಕೊಂಡು ಮೀನು ಉದ್ಯಮದಲ್ಲಿ ಮೇಲುಗೈ ಸಾಧಿಸುವಂತೆ ಸಲಹೆ ನೀಡಿದರು.

ತಾಲೂಕು ಮೀನುಗಾರಿಕೆ ಇಲಾಖೆ ಅಧಿಕಾರಿ ಪ್ರಿಯಾ, ವೀರಾಜಪೇಟೆ ಟೌನ್ ಬ್ಯಾಂಕ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಹಾಗೂ ಫಲಾನುಭವಿಗಳು ಹಾಜರಿದ್ದರು.