ಮಡಿಕೇರಿ, ಫೆ.21 : ಕಳೆದ ವರ್ಷ ಸಂಭವಿಸಿದ ಮಳೆಹಾನಿಯಿಂದ ಸಂಕÀಷ್ಟಕ್ಕೆ ಸಿಲುಕಿರುವ ಕೊಡಗಿನ ವಿದ್ಯಾರ್ಥಿಗಳು ಹಾಗೂ ಯುವ ಸಮೂಹಕ್ಕಾಗಿ ‘ಸೇವಾ ಇಂಟರ್‍ನ್ಯಾಷನಲ್” ಸಂಸ್ಥೆ ವೃತ್ತಿ ಕೌಶಲ್ಯ ಹಾಗೂ ಮಾಹಿತಿ ತಂತ್ರಜ್ಞಾನ ತರಬೇತಿಯನ್ನು ಆಯೋಜಿಸಿದೆ.

ವಿದ್ಯಾರ್ಥಿಗಳು ಸೂಕ್ತ ವೃತ್ತಿಯನ್ನು ಆಯ್ದುಕೊಳ್ಳಲು ತಜ್ಞರಿಂದ ಸಲಹೆ ಹಾಗೂ ಉದ್ಯಮಗಳಲ್ಲಿ ಉದ್ಯೋಗ ಗಳಿಕೆಗೆ ನೆರವು ಈ ತರಬೇತಿಯಲ್ಲಿ ಲಭ್ಯ ಎಂದು ಸೇವಾ ಇಂಟರ್‍ನ್ಯಾಷನಲ್ ಕೊಡಗು ಪ್ರವಾಹ ಪುನರ್ವಸತಿ ಯೋಜನಾ ಕಾರ್ಯನಿರ್ವಾಹಕ ನಿರ್ದೇಶಕ ಬಿಂದುಮಾಧವ ಕೆರೂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತನ್ನ ದೀರ್ಘಕಾಲೀಕ ಕೊಡಗಿನ ಪ್ರವಾಹ ಸಂತ್ರಸ್ತರ ಮರು ವಸತಿ ಯೋಜನೆಯ ಭಾಗವಾಗಿ ಸೇವಾ ಇಂಟರ್‍ನ್ಯಾಷನಲ್ ಈ ತರಬೇತಿಯನ್ನು ಆಯೋಜಿಸಿದ್ದು ಆಸಕ್ತರಿಂದ ಅರ್ಜಿಗಳು ಆಹ್ವಾನಿಸಿದೆ. ಈ ಅರ್ಜಿಗಳನ್ನು ಗೂಗಲ್ ವಿಳಾಸದ ಮೂಲಕ hಣಣಠಿs://ಣiಟಿಥಿuಡಿಟ.ಛಿom/ಥಿ8ಞeಞಜಿಥಿರಿ ಆನ್‍ಲೈನ್‍ನಲ್ಲಿ ತುಂಬಬಹುದು. ಖಾಸಗಿ ಕಂಪೆನಿಗಳು, ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅಥವಾ ಸ್ವಂತ ಉದ್ಯಮ ಆರಂಭಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಿದೆ.

ಅಭ್ಯರ್ಥಿಗಳು ತಾ.23 ರಂದು ಪೊನ್ನಂಪೇಟೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಅರ್ಜಿಯನ್ನು ಸಲ್ಲಿಸಬಹದು ಎಂದು ಬಿಂದುಮಾಧವ ಕೆರೂರ್ ತಿಳಿಸಿದ್ದಾರೆ.

ಪ್ರವಾಹದಲ್ಲಿ ಹಾನಿಗೊಳಗಾದ ಶಾಲಾ ಕಟ್ಟಡಗಳ ದುರಸ್ತಿ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳ ಪುನರ್ ನಿರ್ಮಾಣದಲ್ಲೂ ಸೇವಾ ಕಾರ್ಯಕರ್ತರು ನಿರತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಳೆಹಾನಿ ಸಂತ್ರಸ್ತ ಯುವ ಸಮೂಹ ಸಂಸ್ಥೆಯ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98459 47220 ನ್ನು ಸಂಪರ್ಕಿಸಬಹುದಾಗಿದೆ.

ಉದ್ಯೋಗಮೇಳದಲ್ಲಿ ಎಸ್.ಎಸ್.ಎಲ್‍ಸಿ ಕ್ಕಿಂತ ಕಡಿಮೆ, ಎಸ್.ಎಸ್.ಎಲ್‍ಸಿ, ಪಿಯುಸಿ, ಐಟಿಐ ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ನೆರವನ್ನು ಪಡೆಯಬಹುದಾಗಿದೆ.