ಮಡಿಕೇರಿ, ಫೆ. 21: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಕೆ.ಬಿ. ಮಹಂತೇಶ್ ಸ್ಮರಣಾರ್ಥ ನೀಡಲಾಗುವ 2018ನೇ ಸಾಲಿನ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿ ದಿನ ಪತ್ರಿಕೆಯ ಉಪ ಸಂಪಾದಕ ಕಾಯಪಂಡ ಶಶಿ ಸೋಮಯ್ಯ ಅವರ ವರದಿ ಆಯ್ಕೆಯಾಗಿದೆ. ಶಕ್ತಿ ಪತ್ರಿಕೆಯಲ್ಲಿ ಅಕ್ಟೋಬರ್ 2 ರಂದು ಪ್ರಕಟವಾಗಿದ್ದ ‘ಕ್ರೀಡಾ ಜಿಲ್ಲೆಯ ಕಣ್ಣೆದುರಲ್ಲೆ ಜಿಲ್ಲಾ ಕ್ರೀಡಾಂಗಣ ಕರ್ಮಕಾಂಡ’ ವರದಿ ಆಯ್ಕೆಯಾಗಿದೆ. ತಾ. 23ರಂದು ನಡೆಯುವ ಕೊಡಗು ಪ್ರೆಸ್‍ಕ್ಲಬ್‍ನ 20ನೇ ವಾರ್ಷಿಕೋತ್ಸವ ಸಮಾರಂಭ ದಲ್ಲಿ ವಿಜೇತರಿಗೆ ಪ್ರಶಸ್ತಿಯೊಂದಿಗೆ ರೂ. 5 ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಎಂದು ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ತಿಳಿಸಿದ್ದಾರೆ.