ಶನಿವಾರಸಂತೆ, ಫೆ. 21: ಪಟ್ಟಣದ ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತಿ ಹಾಡ್ಲಳ್ಳಿ ನಾಗರಾಜ್ ವಿರಚಿತ ‘ನಿಲುವಂಗಿಯ ಕನಸು’ ಕಾದಂಬರಿಯ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಮಣ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿ.ಯು. ವಿದ್ಯಾರ್ಥಿನಿಯರಾದ ಅನ್ವಿತಾ, ಸೌಜನ್ಯ, ನಾಫಿಯ ಕಾದಂಬರಿಯನ್ನು ವಿಮರ್ಶಿಸಿ ಮಾತನಾಡಿದರು.

ಹಾಸನದ ಎ.ವಿ.ಕೆ. ಕಾಲೇಜು ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಸಿ.ಚ. ಯತೀಶ್ವರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಟಿ.ವಿ.ಯಿಂದ ದೂರವಿರಬೇಕು. ನಿರಂತರ ಓದುವಿಕೆಯಿಂದ ಬರಹದ ಸಾಮಥ್ರ್ಯ ಗಳಿಸಬಹುದು ಎಂದರು.

ವೇದಿಕೆಯಲ್ಲಿ ಲೇಖಕ ಮೇಟಿಕೇರಿ ಹಿರಿಯಣ್ಣ, ಬರಹಗಾರ ಚಿಕ್ಕಂದೂರು, ಆನಂದ್ ಹಾಗೂ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಅವರೊಂದಿಗೆ ವಿದ್ಯಾರ್ಥಿನಿಯರು, ಕಾದಂಬರಿ ‘ನಿಲುವಂಗಿ ಕನಸು’ ಕಥಾಸಂಕಲನ ‘ಕುಂಬದ್ರೋಣ’ ಹಾಗೂ ಆತ್ಮಕಥನ ‘ಕಾಡು ಹಕ್ಕಿಯ ಹಾದಿ ನೋಟ’ದ ಬಗ್ಗೆ ವಿಮರ್ಶಿಸಿ, ಚರ್ಚಿಸಿ, ಸಂವಾದ ನಡೆಸಿದರು.

ವಿದ್ಯಾಸಂಸ್ಥೆ ನಿರ್ದೇಶಕಿ ನಿತ್ಯಾನಿಧಿ, ಅಧ್ಯಾಪಕ ಕೆ.ಪಿ. ಜಯಕುಮಾರ್, ಉಪನ್ಯಾಸಕ ಸರ್ಫ್‍ರಾಜ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.