ಕುಶಾಲನಗರ, ಫೆ. 21: ಮೇರ ಪರಿವಾರ್ ಬಿಜೆಪಿ ಪರಿವಾರ್ ವಾರ್ಡ್ ಮಟ್ಟದ ಜಾಗೃತಿ ಕಾರ್ಯಕ್ರಮ ಕುಶಾಲನಗರ ಪ.ಪಂ. ಸದಸ್ಯ ಅಮೃತ್‍ರಾಜ್ ಅವರ ನಿವಾಸದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಅಮೃತ್‍ರಾಜ್ ಅವರ ನಿವಾಸದಲ್ಲಿ ಬಿಜೆಪಿ ಧ್ವಜ ಅಳವಡಿಸುವ ಮೂಲಕ ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಗಾಗಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಬೇಕಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಬೇಕಿದೆ ಎಂದರು.

ಈ ಸಂದರ್ಭ ಬಿಜೆಪಿ ಪ್ರಮುಖರಾದ ಉಮಾಶಂಕರ್, ಬೂತ್ ಪದಾಧಿಕಾರಿಗಳಾದ ವೈಶಾಖ್, ಪ್ರವೀಣ್, ಆದರ್ಶ್, ಬಾಲಾಜಿ, ಕೆ.ಆರ್. ಜಗದೀಶ್, ಶರ್ಮ, ಶಾಂತಿಲಾಲ್ ಮೊದಲಾದವರು ಇದ್ದರು.