ಗೋಣಿಕೊಪ್ಪ ವರದಿ, ಫೆ. 21: ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮವು ತಾ. 23 ಹಾಗೂ 24 ರಂದು ಸಾರ್ವಜನಿಕ ಕಾರ್ಯ ಕ್ರಮವಾಗಿ ಆಚರಿಸುವ ಮೂಲಕ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಹಾಗೂ ದಾನಿಗಳನ್ನು ಒಂದಾಗಿಸುವ ಕಾರ್ಯ ಮಾಡಲಾ ಗುತ್ತಿದೆ ಎಂದು ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿನಗಳ ಕಾರ್ಯಕ್ರಮ ದಲ್ಲಿ ಕ್ರೀಡಾಕೂಟ, ಹಿರಿಯ ಶಿಕ್ಷಕರಿಗೆ ಗೌರವ, ಸಾಂಸ್ಕøತಿಕ, ಹಲವು ಕಾರ್ಯಕ್ರಮಗಳ ಮೂಲಕ ಆಚರಿಸಲಾಗುವದು. ಗ್ರಾಮ, ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು, ವೈದ್ಯರು, ವಿಜ್ಞಾನಿ, ಸೇನೆ, ಕ್ರೀಡೆ, ಇಂಜಿನಿಯರ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವ ಹಲವರಿಗೆ ಈ ಶಾಲೆ ಕೈ ತಿದ್ದಿದ ಶಾಲೆ ಎಂಬ ಹೆಗ್ಗಳಿಕೆ ಪಡೆದು ಕೊಂಡಿದೆ. ಅವರನ್ನು ಮತ್ತೆ ಕಾರ್ಯ ಕ್ರಮದ ಮೂಲಕ ಒಂದಾಗಿಸುವ ಪ್ರಯತ್ನ ಮಾಡಲಾಗುತ್ತಿದೆ.

ತಾ. 23 ರಂದು ಕ್ರೀಡೋತ್ಸವ ನಡೆಯಲಿದೆ ತಿತಿಮತಿ ಭಾಗದ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ, ಹಳೆಯ ವಿದ್ಯಾರ್ಥಿ, ಸಾರ್ವಜನಿಕರಿಗೆ ಹಾಗೂ ಅಧ್ಯಾಪಕ ವೃಂದದವರಿಗೆ ವಿವಿಧ ಆಟೋಟಗಳು ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ, ಪಥ ಸಂಚಲನ, ಕ್ರೀಡಾಜ್ಯೋತಿ, ವಿದ್ಯಾರ್ಥಿಗಳ ಕವಾಯತು ನಡೆಯಲಿದೆ. ಕ್ರೀಡೋತ್ಸವವನ್ನು ಅಂತರಾಷ್ಟ್ರೀಯ ಕ್ರೀಡಾಪಟು ಪಾರುವಂಡ ಸಿ. ಸುಗುಣ ಪೊನ್ನಪ್ಪ ಉದ್ಘಾಟಿಸಲಿದ್ದಾರೆ. ಮಾಜಿ ರಾಷ್ಟ್ರೀಯ ಆಟಗಾರ ಚೆಪ್ಪುಡೀರ ಕಾರ್ಯಪ್ಪ, ನೌಕಾಪಡೆ (ನಿ) ಕಮಾಂಡೊ ಸಿ.ಎಂ. ಬೆಳ್ಯಪ್ಪ ಬಹುಮಾನ ವಿತರಿಸಿದ್ದಾರೆ ಎಂದರು.

ತಾ. 24 ರಂದು ಶತಮೋತ್ಸವದ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಬೆ. 9.30 ಕ್ಕೆ ಶೋಭಾಯಾತ್ರೆ ಮೂಲಕ ಆರಂಭಗೊಳ್ಳಲಿದೆ. ಈ ಸಂದರ್ಭ ಸಭಾ ಕಾರ್ಯಕ್ರಮ, ಶಾಲಾ ವರದಿ, ಸ್ಮರಣ ಸಂಚಿಕೆ ಬಿಡುಗಡೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಇಂತಹವುಗಳು ನಡೆಯಲಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷೆ ಸುಮಾ ವಸಂತ್, ಶಾಸಕ ಕೆ.ಜಿ. ಬೋಪಯ್ಯ, ವಿಶೇಷ ಅತಿಥಿಗಳಾಗಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಶಿಕ್ಷಕರರುಗಳಾದ ಕ್ಷೇತ್ರ ಸದಸ್ಯ ಎಸ್.ಎಲ್. ಬೋಜೇಗೌಡ, ನೈಋತ್ಯ ಪದವೀಧರ ಕ್ಷೇತ್ರ್ರದ ಸದಸ್ಯ ಆಯನೂರು ಮಂಜುನಾಥ್, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಜಿ. ಪಂ. ಸದಸ್ಯೆ ಪಿ.ಆರ್. ಪಂಕಜ, ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ತಾ. ಪಂ. ಸದಸ್ಯೆ ಆಶಾ ಜೇಮ್ಸ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಿಇಒ ಲಕ್ಷ್ಮಿಪ್ರಿಯಾ, ಶಿಕ್ಷಣ ಇಲಾಖೆ ಉಪನಿರ್ದೇಶಕ ಪೆರಿಗ್ರಿನ್ ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮನೆಯಪಂಡ ಗಣಪತಿ ಅವರು ತಮ್ಮ ಹೆತ್ತವರ ಜ್ಞಾಪಕಾರ್ಥವಾಗಿ ದೊಡ್ಡ ಮಟ್ಟದ ಕಟ್ಟಡ ನಿರ್ಮಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಅದನ್ನು ದುರಸ್ತಿ ಪಡಿಸಲು ಅವರ ಕುಟುಂಬ ಧನಸಹಾಯ ಮಾಡುವ ಮೂಲಕ ಸ್ಪಂದಿಸಿದ್ದಾರೆ. ಇದರಂತೆ ಶಾಲೆಯ ಎದುರಿನ ಕಟ್ಟಡದ ಭಾಗವನ್ನು ವಿಸ್ತರಿಸಲಾಗಿದೆ ಎಂದರು. ಶಾಸಕರ ಅನುದಾನ ಹಾಗೂ ದಾನಿ ಬಾಚಮಾಡ ಚೇತನ್ ಅವರ ಅನುದಾನದಲ್ಲಿ ತೆರೆದ ಸಭಾಂಗಣ ಕಾಮಗಾರಿ ಪೂರ್ಣ ಗೊಳಿಸಲಾಗುವದು ಶತಮಾನೋತ್ಸವ ಸಂದರ್ಭ ಉದ್ಘಾಟಿಸುವ ಕಾರ್ಯಕ್ರಮವಿದೆ ಎಂದರು.

ಸ್ವಾತಿ ಹಾಗೂ ತಂಡದಿಂದ ಸ್ಮರಣ ಸಂಚಿಕೆ ಮುದ್ರಣ ಕಾರ್ಯ ನಡೆಯುತ್ತಿದೆ. ಉತ್ತಮ ಲೇಖನ, ಬರಹಗಳ ಮೂಲಕ ಅಂದು ಬಿಡುಗಡೆಗೊಳ್ಳಲಿದೆ ಎಂದರು. ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಶಿವಕುಮಾರ್, ಖಜಾಂಜಿ ಫಿಲೋಮಿನಾ, ಪ್ರಮುಖರುಗಳಾದ ಮನು ನಂಜಪ್ಪ, ಮಹೇಶ್, ಕೃಷ್ಣ, ಅನೂಪ್, ಪಂಕಜ, ಮುಖ್ಯಶಿಕ್ಷಕಿ ಹೆಚ್.ಎಂ. ಪಾರ್ವತಿ ಉಪಸ್ಥಿತರಿದ್ದರು.