ಯೋಧರಿಗೆ ವಿಮಾನಯಾನ

ನವದೆಹಲಿ, ಫೆ. 21: ಪುಲ್ವಾಮದಲ್ಲಿ ಭೀಕರ ಭಯೋತ್ಪಾದಕ ಧಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಧರಿಗೆ ಹೆಚ್ಚುವರಿಯಾಗಿ ಕೆಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ರಜೆ ಹಾಕಿ ಊರಿಗೆ ವಾಪಸ್ಸಾಗುವಾಗ ಹಾಗೂ ಕರ್ತವ್ಯಕ್ಕೆ ಮರಳುವಾಗ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ದೆಹಲಿ-ಶ್ರೀನಗರ, ಶ್ರೀನಗರ-ದೆಹಲಿ, ಜಮ್ಮು-ಶ್ರೀನಗರ, ಶ್ರೀನಗರ-ಜಮ್ಮು ಮಾರ್ಗದ ಸೆಕ್ಟರ್‍ಗಳಿಗೆ ವಿಮಾನದಲ್ಲಿ ಸಂಚರಿಸಲು ಸಿಆರ್‍ಪಿಎಫ್‍ನ ಎಲ್ಲಾ ಸಿಬ್ಬಂದಿಗಳಿಗೂ ಅರ್ಹತೆಯನ್ನು ಅನುಮತಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ತೀರ್ಮಾನದಿಂದಾಗಿ ತಕ್ಷಣಕ್ಕೆ, ಪೇದೆ, ಮುಖ್ಯಪೇದೆ, ಸಹಾಯಕ ಸಬ್-ಇನ್ಸ್‍ಪೆಕ್ಟರ್ ಸೇರಿದಂತೆ ವಿವಿಧ ಶ್ರೇಣಿಗಳಲ್ಲಿರುವ ಒಟ್ಟಾರೆ 7.8 ಲಕ್ಷ ಸಿಆರ್‍ಪಿಎಫ್ ಸಿಬ್ಬಂದಿಗಳು ಆದೇಶದಿಂದ ಪ್ರಯೋಜನ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದ ಆದೇಶದಿಂದ ಈ ನಿಯಮಗಳು ವಿಸ್ತರಣೆಯಾಗಿದ್ದು, ಯೋಧರು ಹಾಗೂ ಅಧಿಕಾರಿಗಳು ಇನ್ನು ಮುಂದಿನ ದಿನಗಳಲ್ಲಿ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಿ ಅದರ ವೆಚ್ಚವನ್ನು ಸಿಆರ್‍ಪಿಎಫ್‍ನಿಂದ ಮರಳಿ ಪಡೆಯಬಹುದಾಗಿದೆ.

ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗ

ನವದೆಹಲಿ, ಫೆ. 21: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ಗುರುವಾರ ಉಗ್ರರು ನಡೆಸಿದ ಭೀಕರ ಭಯೋತ್ಪಾದಕ ಧಾಳಿ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಭಾರತ ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪುಲ್ವಾಮಾ ಧಾಳಿಯ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಹರಿಯುತ್ತಿರುವ ಮೂರು ನದಿಗಳ ನೀರನ್ನು ನಿಲ್ಲಿಸಿ ಅದನ್ನು ಯಮುನಾ ನದಿಗೆ ಸೇರುವಂತೆ ತಿರುಗಿಸುವ ಸಂಬಂಧ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇಷ್ಟೇ ಅಲ್ಲದೆ 1960 ರಿಂದ ಚಾಲ್ತಿಯಲ್ಲಿರುವ ಸಿಂಧು ನದಿ ಒಪ್ಪಂದ ಮರುಪರಿಶೀಲನೆ ನಡೆಸಲಾಗುವದು ಎಂದೂ ಗಡ್ಕರಿ ಹೇಳಿದ್ದಾರೆ. ಈ ಮೂಲಕ ಪುಲ್ವಾಮಾ ಧಾಳಿಯ ಬಳಿಕ ಪಾಕ್ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವದನ್ನು ನಿಲ್ಲಿಸದೆ ಹೋದರೆ ಘೋರ ಪರಿಣಾಮ ಎದುರಿಸಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಇಪಿಎಫ್ ಬಡ್ಡಿ ದರ ಏರಿಕೆ

ನವದೆಹಲಿ, ಫೆ. 21: ನೌಕರ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿ ದರಗಳನ್ನು ಹೆಚ್ಚಳ ಮಾಡಿದೆ. ಇಪಿಎಫ್ ಬಡ್ಡಿ ದರದಲ್ಲಿ ಶೇ 0.10 ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. 2016ರ ನಂತರ ಇದೇ ಮೊದಲ ಬಾರಿ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳವಾಗಿದೆ. ಈವರೆಗೆ ಶೇ.8.55 ರಷ್ಟಿದ್ದ ಬಡ್ಡಿ ದರ ಇನ್ನು ಮುಂದೆ ಶೇ. 8.65ಕ್ಕೆ ಏರಿಕೆಯಾಗಲಿದೆ. ಈ ನಿರ್ಧಾರದಿಂದ ದೇಶಾದ್ಯಂತ 6 ಕೋಟಿ ಇಪಿಎಫ್ ಖಾತೆದಾರರಿಗೆ ಅನುಕೂಲವಾಗಲಿದೆ.

ಶಾಸಕ ನ್ಯಾಯಾಂಗ ಬಂಧನ

ರಾಮನಗರ, ಫೆ. 21: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್‍ಗೆ ರಾಮನಗರದ ಜೆಎಂಎಪ್‍ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ಶಾಸಕ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಕಳೆದೊಂದು ತಿಂಗಳಿಂದ ನಾಪತ್ತೆಯಾಗಿದ್ದ ಶಾಸಕ ಕಂಪ್ಲಿ ಗಣೇಶ್‍ರÀನ್ನು ರಾಮನಗರ ಪೆÇಲೀಸರು ಗುಜರಾತಿನ ಸೋಮನಾಥ್‍ನಲ್ಲಿ ಬಂಧಿಸಿ, ತಾ. 21 ರಂದು ಬೆಳಿಗ್ಗೆ ಬೆಂಗಳೂರಿಗೆ ಕರೆತಂದರು. ಏರ್‍ಪೆÇೀರ್ಟ್‍ನಿಂದ ನೈಸ್ ರೋಡ್ ಮೂಲಕ ಬಿಡದಿ ಠಾಣೆಗೆ ಕರೆದೊಯ್ದು, ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಹೇಳಿಕೆಯನ್ನು ದಾಖಲಿಸಿದ್ದರು ಎನ್ನಲಾಗಿದೆ. ಬಳಿಕ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಗಣೇಶ್‍ಗೆ ಬಿಪಿ, ಶುಗರ್, ಇಸಿಜೆ ಸೇರಿದಂತೆ ಹಲವು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ರಾಮನಗರ ಜೆಎಂಎಫ್‍ಸಿ ಕೋರ್ಟ್‍ಗೆ ಬಿಡದಿ ಪೆÇಲೀಸರು ಹಾಜರುಪಡಿಸಿದರು. ರಾಮನಗರ ಜೆಎಂಎಫ್‍ಸಿ ಕೋರ್ಟ್‍ಗೆ ಹಾಜರುಪಡಿಸುವ ಮುನ್ನವೇ ಆರೋಪಿಯನ್ನು 5 ದಿನಗಳ ಪೆÇಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೆÇಲೀಸರು ತೀರ್ಮಾನಿಸಿದ್ದರು. ರಾಮನಗರ ಕೋರ್ಟ್ ನ್ಯಾಯಾಧೀಶೆ ಎಂ. ಅನಿತಾ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.

ಆದಿವಾಸಿಗಳನ್ನು ಹೊರ ಹಾಕಲು ಅಸ್ತು

ನವದೆಹಲಿ, ಫೆ. 21: ದೇಶಾದ್ಯಂತ ಕಾಡುಗಳಲ್ಲಿ ವಾಸಿಸುವ ಹತ್ತು ಲಕ್ಷಕ್ಕೂ ಹೆಚ್ಚಿನ ಬುಡಕಟ್ಟು ಮತ್ತು ಆದಿವಾಸಿ ಕುಟುಂಬಗಳನ್ನು ಕಾಡಿನಿಂದ ಹೊರಹಾಕಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಸುಪ್ರೀಂ ಕೋರ್ಟ್‍ಗೆ ರಾಜ್ಯಗಳು ಸಲ್ಲಿಸಿದ್ದ ಅಫಿಡವಿಟ್‍ನ ವಿಚಾರಣೆ ನಡೆಸಿದ ನ್ಯಾಯಾಲಯ ಸುಮಾರು 11,72,931 ಪರಿಶಿಷ್ಟ ಪಂಗಡ, ಇತರ ಬುಡಕಟ್ಟು ಅರಣ್ಯ ವಾಸಿಗಳ ಭೂ ಮಾಲೀಕತ್ವ ಹಕ್ಕುಗಳನ್ನು ತಿರಸ್ಕರಿಸಿದೆ. ಅರಣ್ಯ ಹಕ್ಕು ಕಾಯ್ದೆಯ ಅನುಸಾರ 31 ಡಿಸೆಂಬರ್ 2005 ಕ್ಕಿಂತ ಮುನ್ನ ಕನಿಷ್ಟ ಮೂರು ತಲೆಮಾರುಗಳಿಂದ ಕಾಡಿನಲ್ಲಿ ವಾಸವಿರುವವರು ಮಾತ್ರವೇ ಭೂಮಿ ಹಕ್ಕುಗಳಿಗೆ ಅರ್ಹರಾಗಿದ್ದಾರೆ. ಆದೇಶದಲ್ಲಿ ನ್ಯಾಯಾಲಯ 17 ರಾಜ್ಯ ಸರ್ಕಾರಗಳಿಗೆ ಬರುವ ಜುಲೈ 12 ರೊಳಗೆ ತಮ್ಮ ವ್ಯಾಪ್ತಿಯಲ್ಲಿನ ಅರಣ್ಯದಲ್ಲಿ ವಾಸವಿರುವ ಆದಿವಾಸಿ, ಬುಡಕಟ್ಟು ಸಮುದಾಯದವರನ್ನು ತೆರವುಗೊಳಿಸುವ ಪ್ರಕ್ರಿಯೆ ಮುಕ್ತಾಯಗೊಳಿಸಲು ಹೇಳಿದೆ. ಅಲ್ಲದೆ ಒಮ್ಮೆ ಹೀಗೆ ಅವರನ್ನು ಒಕ್ಕಲೆಬ್ಬಿಸಿದ ನಂತರ ಒಂದು ಉಪಗ್ರಹದಾಧಾರಿತ ಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಫಾರೆಸ್ಟ್ ಸರ್ವೆ ಆಫ್ ಇಂಡಿಯಾಗೆ ಕೋರ್ಟ್ ನಿರ್ದೇಶಿಸಿದೆ.

ಮಂಗಳೂರು ಸಿಟಿ ಮಾಲ್‍ನಲ್ಲಿ ಬೆಂಕಿ

ಮಂಗಳೂರು, ಫೆ. 21: ಮಂಗಳೂರಿನ ಸಿಟಿ ಸೆಂಟರ್ ಮಾಲ್‍ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದ ಕಾರಣ ಭಾರೀ ಪ್ರಮಾಣದ ಅವಘಡ ತಪ್ಪಿದೆ. ಮಂಗಳೂರು ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್‍ನಲ್ಲಿ ಗುರುವಾರ ಬೆಳಿಗ್ಗೆ 11.30ರ ಸುಮಾರಿಗೆ ಬೆಂಕಿ ಅನಾಹುತ ಸಂಭವಿಸಿದೆ. ಕಟ್ಟಡದ ಐದನೇ ಮಹಡಿಯಲ್ಲಿರುವ ಫುಡ್ ಕೋರ್ಟ್‍ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದರೂ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದ ಕಾರಣ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುಮಾರು ಮುಕ್ಕಾಲು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ.

ರೈಲಿನಲ್ಲಿ ಬಾಂಬ್ ಸ್ಫೋಟ

ಕಾನ್ಪುರ, ಫೆ. 21: ಪುಲ್ವಾಮದಲ್ಲಿ ಕಾರ್ ಬಾಂಬ್ ಸ್ಫೋಟದ ಮೂಲಕ 44 ಯೋಧರ ಸಾವಿಗೆ ಕಾರಣವಾಗಿದ್ದ ಜೈಶ್ ಉಗ್ರ ಸಂಘಟನೆ ಇದೀಗ ಮತ್ತೊಂದು ವಿಧ್ವಂಸಕ್ಕೆ ಕೈ ಹಾಕಿದ್ದು ಉಗ್ರರು ಅಡಗಿಸಿಟ್ಟಿದ್ದ ಬಾಂಬ್‍ವೊಂದು ಕಾಳಿಂದಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಸ್ಫೋಟವಾಗಿದೆ. ಉತ್ತರ ಪ್ರದೇಶದ ಕಾನ್ಪುರ ಬಳಿ ಕಾನ್ಪುರದಿಂದ ಭಿವಾಂಡಿಗೆ ಹೊರಡಲು ಸಿದ್ಧವಾಗಿದ್ದ ರೈಲಿನಲ್ಲಿ ಈ ಸ್ಫೋಟ ಸಂಭವಿಸಿದ್ದು, ಕೂಡಲೇ ಘಟನಾ ಸ್ಥಳಕ್ಕೆ ರೈಲ್ವೇ ಪೆÇಲೀಸರು ಮತ್ತು ರೈಲ್ವೇ ಅಧಿಕಾರಿಗಳು ದೌಡಾಯಿಸಿದ್ದಾರೆ. ಕಡಿಮೆ ಪ್ರಮಾಣದ ತೀವ್ರತೆ ಸ್ಫೋಟವಾದ್ದರಿಂದ ಅಷ್ಟೇನೂ ಸಾವುನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಆದೇಶ ನೀಡಿದ್ದೇವೆ ಎಂದು ಕಾನ್ಪುರ ರೈಲ್ವೇ ನಿರ್ವಹಣಾಧಿಕಾರಿ ಅವಿನಾಶ್ ಚಂದ್ರ ಮಾಹಿತಿ ನೀಡಿದ್ದಾರೆ. ರೈಲಿನ ಬೋಗಿಯೊಂದರ ಶೌಚಾಲಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಯಾವದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕಾರಿಗೆ ಬೆಂಕಿ : ಸಜೀವ ದಹನ

ಹಾಸನ, ಫೆ. 21: ಕಟ್ಟಡಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಜೀವ ದಹನವಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಹೊರವಲಯದಲ್ಲಿ ನಡೆದಿದೆ. ಬೆಂಗಳೂರಿನ ಚಿಕ್ಕಬಾಣಾವರ ನಿವಾಸಿ ವಿವೇಕ್ ನಾಯಕ್ ಹಾಗೂ ಪತ್ನಿ ರೇಷ್ಮಾ ನಾಯಕ್ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಗಳೂರಿನಿಂದ ಹಾಸನದ ಕಡೆಗೆ ಕಾರು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಚನ್ನರಾಯಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.