ಸೋಮವಾರಪೇಟೆ, ಫೆ. 21: ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ “ಪ್ರಾಚ್ಯ ಪ್ರಜ್ಞೆ” ವಿಷಯದ ಭಾಷಣದಲ್ಲಿ ಇಲ್ಲಿನ ಸಂತ ಜೋಸೆಫರ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಬಿ.ಎಂ. ದರ್ಶನ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಇಲ್ಲಿನ ಬಾಣಾವಾರ ರಸ್ತೆ ನಿವಾಸಿ ಎ. ಮೋಹನ್ ಮತ್ತು ವಾಣಿ ದಂಪತಿಗಳ ಪುತ್ರ.