ಮಡಿಕೇರಿ, ಫೆ. 21: ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪೊನ್ನಂಪೇಟೆಯಲ್ಲಿ ‘ಭೇಟಿ ಬಚಾವೋ-ಭೇಟಿ ಪಡಾವೋ’ ಜಾಗೃತಿ ಜಾಥಾ ನಡೆಯಿತು.

ಈ ಕಾರ್ಯಕ್ರಮ ಭಾರತ ಸರಕಾರ, ವಾರ್ತಾ ಮತ್ತು ಪ್ರಸಾರ ಮಂತ್ರಾಲಯ, ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ (ಸಂಗೀತ ಮತ್ತು ನಾಟಕ ವಿಭಾಗ) ಮತ್ತು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಹಯೋಗದೊಂದಿಗೆ ಮಹಿಳಾ ರಕ್ಷಣೆ ಮತ್ತು ಸಬಲೀಕರಣ ಅಭಿಯಾನ ಕುರಿತು ಸಾಂಸ್ಕøತಿಕ ಕಾರ್ಯಕ್ರಮಗಳು, ನಾಟಕ, ರೂಪಕ, ಗೀತೆಯೊಂದಿಗೆ ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸ ನಡೆಯಿತು.

ಕಾರ್ಯಕ್ರಮವನ್ನು ಸ್ನೇಹ ನಿತ್ಯಕಲಾ ತಂಡ, ಮಂಡ್ಯ ಜಿಲ್ಲೆಯ ಕೃಷ್ಣ, ವೈರಮುಡಿ, ಕುಮಾರಿ ಲಕ್ಷ್ಮಿ, ವೆಂಕಟೇಶ್ ನಡೆಸಿಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಬಿ.ಎಂ. ವಿಜಯ್ ಕಲಾ ತಂಡವನ್ನು, ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್, ಪಿ.ಡಿ.ಓ. ಪುಟ್ಟರಾಜು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಸಿ.ಆರ್.ಪಿ. ಜೀವನ್, ಗ್ರಾ.ಪಂ. ಅಧ್ಯಕ್ಷೆ ತಮಟೆ ಬಾರಿಸುವದರೊಂದಿಗೆ ಉದ್ಘಾಟಿಸಲಾಯಿತು. ಕಲಾ ತಂಡದವರು ಎಲೈ ತಂಗಿ ಮನೆಯೊಳಗಿನಿಂದ ಹೊರಗೆ ಬಾ, ಭ್ರೂಣಹತ್ಯೆ, ಬಾಲ್ಯ ವಿವಾಹ, ಕುಡಿತ, ಜೂಜು, ಡ್ರಗ್ಸ್‍ನಿಂದ ಸರ್ವನಾಶ ಎಂಬ ನಾಟಕ ರೂಪಕ, ಸಂಗೀತ ಅರ್ಥಪೂರ್ಣವಾಗಿತ್ತು.