ಸುಂಟಿಕೊಪ್ಪÀ, ಫೆ. 21: ಎಮ್ಮೆಗುಂಡಿಯಲ್ಲಿ ಕಾಲೇಜು ಯುವತಿಯನ್ನು ಆತ್ಯಾಚಾರಗೈದು ಕೊಲೆ ಮಾಡಿದ್ದನ್ನು ಖಂಡಿಸಿ ಬಾಂಗ್ಲಾ ಹಾಗೂ ಹೊರ ರಾಜ್ಯದಿಂದ ಮಧ್ಯವರ್ತಿಗಳ ಮೂಲಕ ಕೆಲಸಕ್ಕೆಂದು ಆಗಮಿಸಿ ಕೊಡಗಿನಲ್ಲಿ ನೆಲೆಸಿ ಹೀನ ಕೃತ್ಯಗಳನ್ನು ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾ. 22 ರಂದು (ಇಂದು) ಸಾರ್ವಜನಿಕರಿಂದ, ದೇಶಾಭಿಮಾನಿ ಸಂಘ-ಸಂಸ್ಥೆಗಳಿಂದ ಸುಂಟಿಕೊಪ್ಪ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥರಾದ ವಿ.ಆರ್. ಸುರೇಶ್, ಬಿ.ಕೆ. ಪ್ರಶಾಂತ್, ನಾಗೇಶ್ ಪೂಜಾರಿ, ರಮೇಶ್ ರೈ ಬಿ.ಬಿ. ಹೊನ್ನಪ್ಪ, ಯು.ಎಸ್. ಕುಮಾರ್, ಮಂಜು ಪಿ.ಬಿ. ಸೋಮಪ್ಪ ಕುಂಬೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.